ಬಳ್ಳಾರಿ : ಗಾಲಿ ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದ ಅಮಿತ್ ಶಾ

ಬಳ್ಳಾರಿ : ಜನಾರ್ಧನರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಮಿತ್ ಶಾ ಹೇಳಿಕೆಯನ್ನು ಗಣಿ ಉದ್ಯಮಿ ಟಪಾಲ್ ಗಣೇಶ್‌ ಸ್ವಾಗತಿಸಿದ್ದು, ಹೈ ಕಮಾಂಡ್ ಮೌಖಿಕ ಆದೇಶ ನೀಡಿದೆ ಎಂಬ ಹೇಳಿಕೆಗೆ ನಾನು ವಿರೋಧಿಸಿದ್ದೆ. ಗಾಲಿ ಜನಾರ್ಧನ ರೆಡ್ಡಿಯನ್ನು ಬಿಜೆಪಿಯಿಂದ ದೂರ ಇಟ್ಟರೇ ಉತ್ತಮ. ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮಶೇಖರ್ ರೆಡ್ಡಿ ಈಗಾಗಲೇ ಪ್ರಚಾರ ಮಾಡುತ್ತಿದ್ದಾರೆ. ಅವರು ಕಾರ್ಪೋರೇಟರ್ ಪದ್ಮಾವತಿ ಯಾದವ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಸೋಮಶೇಖರ್ ರೆಡ್ಡಿಗೂ ಟಿಕೇಟ್ ನೀಡಬಾರದೆಂದು ಟಪಾಲ್‌ ಗಣೇಶ್ ಅಮಿತ್ ಶಾಗೆ ಮನವಿ ಮಾಡಿದ್ದಾರೆ. ಟಪಾಲ್ ಗಣೇಶ್‌ ರೆಡ್ಡಿ ಬ್ರದರ್ಸ್ ಮತ್ತು ಅಕ್ರಮ ಗಣಿಗಾರಿಕೆ ವಿಚಾರವಾಗಿ ಸತತ ಹೋರಾಟ ಮಾಡುತ್ತಿರುವ ವ್ಯಕ್ತಿಯಾಗಿದ್ದು, ಅಮಿತ್ ಶಾ ಹೇಳಿಕೆ ಗಣೇಶ್‌ ಅವರಿಗೆ ಆನೆಬಲ ಬಂದಂತಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com