ರಾಮಭಕ್ತ ಹನುಮಂತನಿಗೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ !!

ಬಾಗಲಕೋಟೆ : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಜಾರಿ ಮಾಡಿರುವ ನೀತಿ ಸಂಹಿತೆಯ ಬಿಸಿ ರಾಮಭಕ್ತ ಭಕ್ತ ಹನುಮಂತನಿಗೂ ತಟ್ಟಿದೆ.

ಹೌದು ಇಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಪ್ರತೀ ವರ್ಷ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಸದ್ಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಬಾಗಲಕೋಟೆ ನಗರದ ಹಲವು ಆಂಜನೇಯನ ದೇವಸ್ಥಾನಗಳಲ್ಲಿ ಏರ್ಪಡಿಸುತ್ತಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಬ್ರೆಕ್ ಹಾಕಿದ್ದಾರೆ. ಫೂರ್ವಾನುಮತಿ ಪಡೆಯದೇ ಇದ್ದಿದ್ದರಿಂದ ಕೇವಲ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನಗಳಲ್ಲಿ ನೀಡುವ ಅಭಿಷೇಕ, ತಿರ್ಥಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ.

ಆದ್ರೆ ವಿಶೇಷ ದಿನಗಳಂದು ಏರ್ಪಡಿಸುತ್ತಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ರದ್ದಾಗಿದ್ದು ಹನುಮ ಭಕ್ತರಲ್ಲಿ ನಿರಾಸೆ ಮೂಡಿದೆ. ಕೇವಲ.ಪೂಜೆ ಪುನಸ್ಕಾರಗಳಿಗೆ ಭಕ್ತರು ತೃಪ್ತಿ ಪಡಬೇಕಾಗಿದೆ. ಪರವಾನಿಗೆ ಇಲ್ಲದೇ ಏರ್ಪಡಿಸುವ ಅನ್ನ ಸಂತರ್ಪಣೆ ಕಾರ್ಯಕ್ರಮಗಳ ಮೇಲೆ ಚುನಾವಣಾ ಅಧಿಕಾರಿಗಳು ಹದ್ದಿನ ಕಣ್ಣಿರಿಸಿದ್ದಾರೆ.

Leave a Reply

Your email address will not be published.