ಬಯಲಾಯ್ತು  ಬಿಜೆಪಿ ಚುನಾವಣಾ ಅಸಲಿಯತ್ತು  : ವೈರಲ್ಲಾಗ್ತಿದೆ ಆಡಿಯೋ

ತುಮಕೂರು : ತುಮಕೂರಿನಲ್ಲಿ ಕಳೆದ ಬಾರಿಯ ಎಂ ಪಿ ಚುನಾವಣೆಯ ಅಸಲಿ ಸತ್ಯ  ಹೊರಬಿದ್ದಿದೆ. ಬಿಜೆಪಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಲು 2.5 ಕೋಟಿ ಕೊಟ್ಟಿದ್ರಂತೆ…ಹೀಗಂತಾ ಸ್ವತಃ ಜಿ.ಎಸ್.ಬಸವರಾಜು ಅವರೇ ಹೇಳಿಕೊಂಡಿದ್ದಾರೆ.

ಜಿ.ಎಸ್.ಬಸವರಾಜು ಮಾತನಾಡಿರೋ ಆಡಿಯೋ ಇದೀಗ ತುಮಕೂರಿನಲ್ಲಿ ತೀವ್ರ ಸಂಚಲನ‌ ಮೂಡಿಸಿದೆ. ಮತದಾರರಿಗೆ ಹಂಚುವಂತೆ ಕೊಟ್ಟ ಹಣವನ್ನು ಮುಖಂಡರು ತಿಂದಿದ್ದಾರಂತೆ. ಮಾಜಿ ಶಾಸಕ ಶಿವನಂಜಯ್ಯರ ಮಗ ರವಿಶಂಕರ್ ಬಸವರಾಜುಗೆ ಮೋಸ ಮಾಡಿದ್ದರು .ಹಾಗಾಗಿ ನಾನು ಸೋತೆ ಎಂದು ಆಡಿಯೋದಲ್ಲಿ ಜಿ.ಎಸ್.ಬಸವರಾಜು ಹೇಳಿಕೊಂಡಿದ್ದಾರೆ. ಮಂಚಲದೊರೆ ರಮೇಶ್ ಎನ್ನುವಾತನೊಂದಿಗೆ ಮಾತನಾಡಿರೋ ಈ‌ ಆಡಿಯೋ ವೈರಲ್ ಆಗುತ್ತಿದ್ದಂತೆ ರೊಚ್ಚಿಗೆದ್ದ ಜಿ.ಎಸ್ ಬಸವರಾಜು ಆಗಿನ ಬೆಂಬಲಿಗ ರವಿಶಂಕರ್, ಹಣ ನೀಡಿದ್ದು 2.5 ಕೋಟಿಯಲ್ಲ 49 ಲಕ್ಷ ಎಂದಿದ್ದಾರೆ. ಗುಬ್ಬಿಯ ಮಾಜಿ ಶಾಸಕ ದಿವಂಗತ ಶಿವನಂಜಪ್ಪ ಪುತ್ರ ರವಿಶಂಕರ್ ಜಿ.ಎಸ್.ಬಸವರಾಜು ನೀಡಿದ್ದು ಕೇವಲ 49 ಲಕ್ಷ ಎಂದು ಚುನಾವಣೆಯ ಅಸಲಿ ಸಂಗತಿ ಹೊರಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com