ಸಿದ್ದರಾಮಯ್ಯ ವಿರುದ್ಧ BSY ಹೊಸ ತಂತ್ರ : CM ವಿರುದ್ಧ ಕಣಕ್ಕಿಳಿಯಲಿದ್ದಾರೆ ವಿಜಯೇಂದ್ರ ?

ತುಮಕೂರು : ಸಿದ್ದಗಂಗಾ ‌ಮಠಕ್ಕೆ ಬಿಎಸ್ ವೈ ಪುತ್ರ ವಿಜಯೇಂದ್ರ ಭೇಟಿ ನೀಡಿದ್ದು, ಶಿವಕುಮಾರ ಶ್ರೀ ಗಳ ಆಶೀರ್ವಾದ ಪಡೆದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ವರುಣಾ ಕ್ಷೇತ್ರವನ್ನ ಅಭಿವೃದ್ಧಿ ಪಡಿಸುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಸುಭದ್ರ ಸರ್ಕಾರ ನೀಡುವಲ್ಲಿ ಪ್ರಸ್ತುತ ರಾಜ್ಯ‌ಸರ್ಕಾರದ ಕೊಡುಗೆ ಶೂನ್ಯ. ಕಾರ್ಯಕರ್ತರು ಒತ್ತಾಯಿಸಿದ್ರೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ.

ಸಿದ್ದರಾಮಯ್ಯನವರನ್ನ ಸೋಲಿಸಲು‌ ಬಿಜೆಪಿ ಯಾವುದೇ ಪಕ್ಷದೊಂದಿಗೆ‌ ಹೊಂದಾಣಿಕೆ ಮಾಡಿಕೊಂಡಿಲ್ಲ. ಎಲ್ಲಾ  ಕ್ಷೇತ್ರದಲ್ಲೂ ಹಿಂದುಳಿದ ವರ್ಗಗಳ ‌ಬೆಂಬಲ‌ ಯಡಿಯೂರಪ್ಪನವರಿಗಿದೆ. ವರುಣಾದಲ್ಲಿ ಈ ಬಾರಿ ಸಿದ್ದರಾಮಯ್ಯ ನವರ ಸೋಲು ಖಚಿತ. ಹಳೇ‌ ಮೈಸೂರು‌‌ ಹಾಗೂ‌‌ ಮೈಸೂರು‌ ಭಾಗದಲ್ಲಿ ಬಿಜೆಪಿ ಅತಿ ಹೆಚ್ಚಿನ ಸ್ಥಾನ ಗಳಿಸಲಿದೆ. ರಾಜ್ಯದ ಮುಖ್ಯ ಮಂತ್ರಿಯಾಗಿ ಎಲ್ಲಾ ಸಮುದಾಯದವರನ್ನೂ ಒಟ್ಟಿಗೆ ಕೊಂಡೊಯ್ಯುವಲ್ಲಿ ಸಿದ್ದರಾಮಯ್ಯನವರು ಎಡವಿದ್ದಾರೆ..ಮೈಸೂರು‌ ಭಾಗದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಈಗಾಗಲೇ ಆಕ್ರೋಶ ಭುಗಿಲೆದ್ದಿದೆ. ಸಮಾಜವನ್ನ ಒಡೆಯುವ ಕೆಲಸ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪ ನವರು ಕೇವಲ‌ ವೀರಶೈವ‌ ಮತಗಳಿಂದ ಮಾತ್ರ ಗೆಲುವು ಸಾಧಿಸಲ್ಲ ಎಲ್ಲಾ ಸಮುದಾಯಗಳೂ ಅವರೊಟ್ಟಿಗಿವೆ. ರಾಜ್ಯದಲ್ಲಿ ಅಭಿವೃದ್ಧಿಯ ವಿಚಾರದ ಜೊತೆಗೆ ಬೇರೆ ಬೇರೆ ವಿಷಯಗಳು‌ ಕೂಡಾ ಚರ್ಚೆಯಾಗುತ್ತಿದೆ. ನಾನು ಸ್ಪರ್ಧೆ ಮಾಡಬೇಕೆನ್ನುವುದು ವರುಣಾ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯಈ ಕುರಿತು ಮಾಧ್ಯಮ ಗಳಲ್ಲಿ ಚರ್ಚೆ ನಡೆಯುತ್ತಿದೆ. ಸ್ಪರ್ಧೆಯ ಕುರಿತು ಈಗಲೇ ನಾನೇನೂ ಹೇಳುವುದಿಲ್ಲ ಎಂದು ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com