ಬಾಲ್‌ ಟ್ಯಾಂಪರಿಂಗ್‌ ವಿವಾದ : ಸ್ಮಿತ್, ವಾರ್ನರ್‌ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರೋಹಿತ್ !

ದೆಹಲಿ : ಚೆಂಡು ವಿರೂಪಗೊಳಿಸಿರುವ ಪ್ರಕರಣ ಸಂಬಂಧ ರೋಹಿತ್ ಶರ್ಮಾ ಹೇಳಿಕೆ ನೀಡಿದ್ದು, ಇದೊಂದೇ ಪ್ರಕರಣವನ್ನು ಮುಂದಿಟ್ಟುಕೊಂಡು ಆಸೀಸ್‌ ನಾಯಕ ಸ್ಮಿತ್‌ ಹಾಗೂ ಉಪನಾಯಕ ವಾರ್ನರ್‌ ಅವರ ವೃತ್ತಿ ಜೀವನವನ್ನು ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸ್ಮಿತ್‌ ಹಾಗೂ ವಾರ್ನರ್‌ ಅವರನ್ನು ಆಸೀಸ್‌ ಕ್ರಿಕೆಟ್ ಮಂಡಳಿ ಒಂದು ವರ್ಷದ ಮಟ್ಟಿಗೆ ನಿಷೇಧ ಹೇರಿದ್ದು, ಈ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವ ರೋಹಿತ್‌ ಶರ್ಮಾ, ಸ್ಮಿತ್‌ ವಿಮಾನದಿಂದ ಬಂದ ಕೂಡಲೆ ಸುದ್ದಿಗೋಷ್ಠಿಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು ಕಣ್ಣೀರಿಟ್ಟಿದ್ದು ಇನ್ನೂ ನನ್ನ ಕಿವಿಯಲ್ಲಿ ಗುಯ್‌ ಗುಡುತ್ತಿದೆ. ಅವರು ತಪ್ಪು ಮಾಡಿದ್ದಾರೆ.ಅಲ್ಲದೆ ಅದನ್ನು ಒಪ್ಪಿಕೊಂಡಿದ್ದಾರೆ. ಇಲ್ಲಿದ್ದುಕೊಂಡು ಆಸೀಸ್‌ ಕ್ರಿಕೆಟ್ ಮಂಡಳಿಯನ್ನು ಪ್ರಶ್ನಿಸುವುದು ಸರಿಯಲ್ಲ. ಆದರೆ ಅವರಿಬ್ಬರೂ ನನ್ನ ಪಾಲಿಗೆ ಶ್ರೇಷ್ಠ ಕ್ರಿಕೆಟಿಗರು ಎಂದಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com