Movie Masala : ತನ್ನ ಕಾರು ಚಾಲಕನಿಗೆ ಹೃದಯ ಒಪ್ಪಿಸಿದ ಮೋಹಕ ನಟಿ ……!

ಮುಂಬೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ಮೋಹನ್ ಬಾಬು ಪುತ್ರಿ ಮಂಜು ಲಕ್ಷ್ಮಿ ತನ್ನ ಕಾರು ಚಾಲಕನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.

ಪ್ರತಿದಿನ ಲಕ್ಷ್ಮಿಯನ್ನ ಕಾರು ಚಾಲಕನೇ ಕಾಲೇಜ್ ಗೆ ಪಿಕಪ್ , ಡ್ರಾಪ್ ಮಾಡುತ್ತಿದ್ದ. ಪ್ರತಿದಿನ ನೋಡುತ್ತಿದ್ದ ಕಾರ್ ಡ್ರೈವರ್ ಬಗ್ಗೆ ಈ ಲಕ್ಷ್ಮೀಯಲ್ಲಿ ಒಂದು ರೀತಿಯ ಭಾಂದವ್ಯ ಹಾಗೂ ಪ್ರೀತಿ ಹುಟ್ಟಿತ್ತು. ಈ ವಿಷಯ ತಂದೆ ಮೋಹನ್ ಬಾಬುಗೆ ಗೊತ್ತಾಯಿತು .


ಇದರಿಂದ ಕೆಂಡಾಮಂಡಲರಾದ ಮೋಹನ್ ಬಾಬು ಆತನನ್ನ ಕೆಲಸದಿಂದ ತೆಗೆದು ಹಾಕಿದರು . ಆದರೆ ಪ್ರೀತಿಯನ್ನ ಯಾರು ತಡೆಯಲು ಸಾಧ್ಯ ಹೇಳಿ ..? ನಟಿ ಲಕ್ಷ್ಮಿ ಹಾಗೂ ಕಾರ್ ಡ್ರೈವರ್ ಮತ್ತೆ ಭೇಟಿಯಾದರು. ಪ್ಲಾನ್ ಮಾಡಿಕೊಂಡು ಮನೆಯಿಂದ ಓಡಿಹೋಗಿ ವಿಜಯವಾಡದಲ್ಲಿ ಮದುವೆಯಾದರು . ಯಾರಿಗೂ ತಿಳಿಯದಂತೆ ಒಂದು ಮನೆ ಮಾಡಿ ಸಂಸಾರ ಶುರು ಮಾಡಿದರು.


ತನ್ನ ಅಧಿಕಾರವನ್ನ ಬಳಸಿದ ಮೋಹನ್ ಬಾಬು ಇವರಿದ್ದ ಸ್ಥಳವನ್ನ ಪತ್ತೆಹಚ್ಚಿ ಕಾರ್ ಡ್ರೈವರ್ ನ್ನ ಥಳಿಸಿ ಮಗಳನ್ನ ಕರೆದುಕೊಂಡು ಬಂದರು . ನಂತರ ಲಕ್ಷ್ಮೀಗೆ ಬೇರೆ ಮದುವೆ ಮಾಡಿಸಲಾಯಿತು . ಆದರೆ ಲಕ್ಷ್ಮೀಯ ಮೊದಲ ಗಂಡ ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲ.

Leave a Reply

Your email address will not be published.