ಗುತ್ತೇದಾರ್‌ ಬೇಕಾದ್ರೆ BJPಗೆ ಬರಲಿ ಆದ್ರೆ ಟಿಕೆಟ್ ಮಾತ್ರ ನಂಗೇ ಕೊಡ್ಬಕು ಎಂದ BJP ನಾಯಕ !

ಕಲಬುರ್ಗಿ : ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಬಿಜೆಪಿಗೆ ಬರಲಿ. ಆದರೆ ಅಫಜಲಪುರ ಟಿಕೇಟ್ ಮಾತ್ರ ನನಗೇ ಕೊಡಬೇಕು ಎಂದು ಮಾಜಿ ಶಾಸಕ ಎಂ.ವೈ ಪಾಟೀಲ್‌ ಹೇಳಿಕೆ ನೀಡಿದ್ದಾರೆ.
ಕಷ್ಟ ಕಾಲದಲ್ಲಿ ನಾನು ಯಡಿಯೂರಪ್ಪ ಅವರ ಜೊತೆ ನಿಂತಿದ್ದೇನೆ. ಹೀಗಿರಬೇಕಾದರೆ ಈಗ ಬಂದವರಿಗೆ ಟಿಕೇಟ್ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದ್ದು,  ಬೇಷರತ್ತಾಗಿ ಮಾಲಿಕಯ್ಯ ಬರುತ್ತಿದ್ದಾರ ಎಂದು ಯಡಿಯೂರಪ್ಪ ಹೇಳಿದ್ದಾರೆ. ಬೇಕಿದ್ದರೆ ಮಾಲೀಕಯ್ಯ ಅವರನ್ನು ಎಂ.ಎಲ್.ಸಿ. ಮಾಡಲಿ
ಆದರೆ ಯಾವುದೇ ಕಾರಣಕ್ಕೂ ನನಗೆ ಬಿಜೆಪಿ ಟಿಕೇಟ್ ತಪ್ಪಿಸುವಂತಿಲ್ಲ. ಪಕ್ಷಕ್ಕೆ ಒಳ್ಳೆಯದಾಗುವುದಿದ್ದರೆ ಮಾಲೀಕಯ್ಯ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಅಭ್ಯಂತರವಿಲ್ಲ. ಟಿಕೇಟ್ ವಿಷಯದಲ್ಲಿ ಹಿಂದೆ ನೀಡಿದ ಭರವಸೆಯಂತೆಯೇ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com