ಮೋದಿ, ಶಾರನ್ನು ಟೀಕಿಸಿಲ್ಲ ಅಂದ್ರೆ ಸಿದ್ದರಾಮಯ್ಯಂಗೆ ತಿಂದಿದ್ದು ಅರಗಲ್ಲ : ಈಶ್ವರಪ್ಪ ಆರೋಪ

ಕಲಬುರಗಿ : ಅಫಜಲಪುರ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಸೇರ್ಪಡೆ ವಿಚಾರ ಸಂಬಂಧ ಕಲಬುರಗಿಯಲ್ಲಿ ವಿಪಕ್ಷ ನಾಯಕ ಕೆ.ಎಸ್‌ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಗುತ್ತೇದಾರ್‌ರನ್ನ ನೀವೇ ಪಕ್ಷಕ್ಕೆ ಕರೆದಿದ್ದಿರಾ ಅಥವ ಅವರಾಗಿಯೇ ಬಂದಿದ್ದಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಪ್ರೀತಿ ಎಡಗಡೆ ಹುಟ್ಟುತ್ತಾ ಅಥಾವ ಬಲಗಡೆ ಹುಟ್ಟುತ್ತಾ?. ಪ್ರೀತಿ ಹುಡುಗನ ಕಡೆಯಿಂದ ಹುಟ್ಟುತ್ತಾ ಅಥವಾ ಹುಡುಗಿ ಕಡೆಯಿಂದ ಹುಟ್ಟುತ್ತಾ ಎಂದು ಈಶ್ವರಪ್ಪ ಮರುಪ್ರಶ್ನೆ ಹಾಕಿದ್ದಾರೆ. ಜೊತೆಗೆ ಪ್ರೀತಿ ಎಲ್ಲಿಂದಲೇ ಹುಟ್ಟಲಿ ಮತ್ತು ಯಾರಿಂದಲೇ ಹುಟ್ಟಲಿ, ಪ್ರೀತಿ ಮುಖ್ಯ. ಗುತ್ತೇದಾರ್ ತಾವಾಗಿಯೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರಿಗೆ ಟಿಕೆಟ್ ನೀಡುತ್ತೇವೆ ಎಂದು  ಯಾವುದೇ ಭರವಸೆ ನೀಡಿಲ್ಲ

ರಾಜ್ಯದ 224 ಕ್ಷೇತ್ರಗಳ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಟಿಕೆಟ್ ಫೈನಲ್ ಅಂತ ಕೇವಲ ಮಾಧ್ಯಮಗಳಲ್ಲಿ ಬರುತ್ತಿದೆ. ಅಭ್ಯರ್ಥಿಗಳ ಆಯ್ಕೆಗೆ ಕೇಂದ್ರ ಸಮಿತಿ ಮೂರು ಅಂಶದ ಸೂತ್ರ ರಚಿಸಿದೆ. ಮೋದಿ ಮತ್ತು ಅಮಿತ್ ಶಾ ರನ್ನು ಟೀಕಿಸದಿದ್ದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ತಿಂದಿದ್ದು ಅರಗುವುದಿಲ್ಲ. ದಿನ ಬೆಳಗಾದರೂ ಇಬ್ಬರೂ ನಾಯಕರ ವಿರುದ್ಧ ಟೀಕಿಸುತ್ತಲೇ ಇರುತ್ತಾರೆ. ನನ್ನನ್ನು ಕಂಡರೆ ಮೋದಿಗೆ ಭಯ, ಅಮಿತ್ ಶಾಗೆ ಭಯ ಎಂದು ಹೇಳಿಕೆ ನೀಡುತ್ತಾರೆ
ಸೂರ್ಯ ಎಲ್ಲಿ ಬೆಂಕಿ ಕಡ್ಡಿ ಎಲ್ಲಿ. ಸಿದ್ಧರಾಮಯ್ಯ ಮುಖ್ಯಮಂತ್ರಿ ರೀತಿ ವರ್ತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com