ನನ್ನ ಜನರಿಗೆ ಆಗ್ತಿರೋ ಅನ್ಯಾಯ ನೋಡ್ತಿದ್ರೆ ನಿದ್ರೆ ಬರಲ್ಲ : H.D ದೇವೇಗೌಡ

ನಾಗಮಂಗಲ : ಈ ಬಾರಿ ನೆಲಮಂಗಲದಲ್ಲಿ ಕುಮಾರಪರ್ವ ಯಾತ್ರೆ ನಡೆಯುತ್ತಿದ್ದು, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಬಳಿಕ ಮಾತನಾಡಿದ ಎಚ್‌ಡಿಡಿ, 1972 ರಿಂದಲೂ ನಾಗಮಂಗಲಕ್ಕೆ ಬಂದಿದ್ದೇನೆ. ಮಂಡ್ಯದ ಇತಿಹಾಸದಲ್ಲಿ ಇಂತಹ ಸಭೆ ನಡೆದಿಲ್ಲ. ಒಂದು ಲಕ್ಷ ಕಾರ್ಯಕರ್ತರು ಸೇರಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಜನರಿಗೆ ವಂಚನೆ, ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಕುಮಾರಸ್ವಾಮಿ ಗೆ ನೋವನ್ನ ಕೊಟ್ಟಿದ್ದಾರೆ. ದೇವೇಗೌಡರು ನಿನ್ನೆ ಮೊನ್ನೆ ರಾಜಕಾರಣಿ ಅಲ್ಲ. ಮಂಡ್ಯ ಜನರಿಗೆ ಆಗುತ್ತಿರುವ ಅನ್ಯಾಯ ನೋಡಿ ನಿದ್ದೆ ಬರ್ತಿಲ್ಲ. ಮನಸ್ಸಿಗೆ ಖೇದ ಆಗುತ್ತಿದೆ. ಈ ಪಕ್ಷ ಹುಟ್ಟಿರೋದು ಬಡವರಿಗಾಗಿ, ಕಾರ್ಮಿಕರಿಗಾಗಿ, ದಲಿತರಿಗಾಗಿ .ಇದು ಅಪ್ಪ ಮಕ್ಕಳ ಪಕ್ಷ ಅಲ್ಲ. ಸಿದ್ದರಾಮಯ್ಯ ರನ್ನು ಡಿಸಿಎಂ ಮಾಡಿದ್ದು ಕುಮಾರಸ್ವಾಮಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯರನ್ನು ಸಿಎಂ ಮಾಡಲು ಸೋನಿಯಾ ಮುಂದೆ ಆರು ದಿನ ಕೈ ಮುಗಿದಿದ್ದು ಯಾರು ಎಂದು ಪ್ರಶ್ನಿಸಿರುವ ಎಚ್‌ಡಿಡಿ, ನಿನ್ನ ರಾಜಕೀಯ ತಾಯಿ ಯಾರು ಎಂಬುದನ್ನು ಹೇಳಬೇಕು. ಜನತಾದಳ ನಿನ್ನ ತಾಯಿ. ಈ ಬಾರಿಯ ಚುನಾವಣೆಯಲ್ಲಿ ನಿನ್ನ ರಾಜಕೀಯ ಅಂತ್ಯವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

 

Leave a Reply

Your email address will not be published.