ಚುನಾವಣಾ ಪ್ರಚಾರದ ಅಖಾಡಕ್ಕಿಳಿದ ಸಿದ್ದರಾಮಯ್ಯ : ಶಾಗೆ CM ಕಂಡ್ರೆ ಶುರುವಾಗಿದ್ಯಂತೆ ಭಯ

ಮೈಸೂರು: ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ. ಕುಮಾರಸ್ವಾಮಿಯನ್ನು ಕೇಳಿಕೊಂಡು ನಾನು ರಾಜಕಾರಣ ಮಾಡಬೇಕಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಎಷ್ಟು ಸಲ ನಿಂತಿದ್ದೀನಿ ಅಂತ ಕುಮಾರಸ್ವಾಮಿಗೆ ಗೊತ್ತ ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ನಾನು ಚಾಮುಂಡೇಶ್ವರಿಯಲ್ಲಿ 7 ಬಾರಿ ಸ್ಪರ್ಧಿಸಿದ್ದೇನೆ. 5 ಬಾರಿ ಗೆದ್ದಿದ್ದೇನೆ, 2 ಬಾರಿ ಸೋತಿದ್ದೇನೆ. ಅದೇ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಾನು ಸ್ಪರ್ಧೆ ಮಾಡುತ್ತೇನೆ. ಯಾವುದೇ ಅನುಮಾನ ಬೇಡ. ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ನನಗೆ ನಂಬಿಕೆ ಇದೆ. ನಾನು ಮತ್ತೆ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅಮಿತ್ ಶಾ ವಿರುದ್ದ ಗುಡುಗಿದ ಸಿದ್ದರಾಮಯ್ಯ, ನನ್ನ ಕಂಡರೆ ಅಮಿತ್ ‌ಶಾಗೆ ಭಯ.ಹಾಗಾಗಿ ನಾನೂ ಹೋದಲ್ಲೆಲ್ಲ ಅಮಿತ್ ಶಾ ಹಿಂಬಾಲಿಸುತ್ತಿದ್ದಾರೆ.ಅವರು ಮಠಕ್ಕಾದರೂ ಹೋಗಲಿ, ಎಲ್ಲಿಗೆ ಬೇಕಾದರೂ ಹೋಗಲಿ. ಅದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆ ಬಗ್ಗೆ ನಾನೂ ಏನನ್ನು ಹೇಳುವುದಿಲ್ಲ. ಅಮಿತ್ ಶಾ ನನ್ನನ್ನು ಅಹಿಂದು ಎಂದು ಹೇಳ್ತಾರೆ‌.ಅಮಿತ್ ಶಾ ಜೈನ ಧರ್ಮದವರು. ಅವರು ಹಿಂದೂನಾ ಅಥವಾ ಅಹಿಂದುನಾ ಅಂತ ಸ್ಪಷ್ಟಪಡಿಸಲಿ ಎಂದಿದ್ದಾರೆ.
ಬೈ ಎಲೆಕ್ಷನ್ ನಲ್ಲಿ ಯಡಿಯೂರಪ್ಪ ಸೇರಿದಂತೆ ಎಲ್ಲರೂ ಬಂದಿದ್ರು.ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಂದಿದ್ರು. ಆದರೆ ಗೆದ್ದಿದ್ದು ಯಾರು ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ ಎಂದಿದ್ದಾರೆ. ಬಿಎಸ್ವೈಯಿಂದ ಸಿದ್ದರಾಮಯ್ಯರಿಗೆ ಭ್ರಷ್ಟ ಎಂಬ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜೈಲಿಗೆ ಹೋಗಿ ಬಂದವರೆಲ್ಲ ನನಗೆ ಪಾಠ ಹೇಳಿ ಕೊಡ್ತಾರಾ.?ಎಂದು ಪ್ರಶ್ನಿಸಿದ್ದಾರೆ

Leave a Reply

Your email address will not be published.

Social Media Auto Publish Powered By : XYZScripts.com