ಈ ಮುಂಡೇದು ಬರೀ ಮಾತಾಡುತ್ತೆ ಹೊರತು ಕೆಲ್ಸ ಮಾಡಲ್ಲ : ಮೋದಿಗೆ CM ಇಬ್ರಾಹಿಂ ಟಾಂಗ್‌

ಚಿಕ್ಕಮಗಳೂರು : ಟಿಪ್ಪು ಸುಲ್ತಾನ್ ಜಯಂತಿ ಮಾಡಿದ ತಕ್ಷಣ ನಿಮಗೆಲ್ಲಾ ಉರಿ ಬಂತು. ಸಾಬರಿಗೆ ಜಯಂತಿ ಮಾಡೋ ಪದ್ಧತಿ ಇಲ್ಲ. ಮನೆಯಲ್ಲಿ ಕೂತು ನಮಾಜ್ ಮಾಡಿದ್ರೆ ಒಂದು ನಿಮಿಷದಲ್ಲಿ ದೇವರಿಗೆ ಹೋಗುತ್ತೆ ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.

ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಸಿ.ಟಿ ರವಿ, ಟಿಪ್ಪು ಸುಲ್ತಾನ್ ಬಗ್ಗೆ ಶೃಂಗೇರಿ ಸ್ವಾಮಿಗಳನ್ನ ಹೋಗಿ ಕೇಳಬೇಕು. ಟಿಪ್ಪು ಸುಲ್ತಾನರ ಕಾಲದಲ್ಲಿ ಮಹಾರಾಷ್ಟ್ರದ ಪೇಶ್ವೆಗಳು ಬಂದು ಮಠವನ್ನು ನಾಶ ಪಡಿಸಿದ್ದರು. ಟಿಪ್ಪು ಸುಲ್ತಾನರಿಗೆ ವಿಷಯ ಗೊತ್ತಾದ ತಕ್ಷಣ ಶೃಂಗೇರಿಗೆ ಬಂದರು. ಪೇಶ್ವೆಗಳೊಂದಿಗೆ ಹೋರಾಡಿ ಮತ್ತೇ ಶೃಂಗೇರಿಗೆ ಸ್ವಾಮಿಗಳನ್ನು ಕರೆತಂದು ಶಾರದಾಂಬೆ ಪೀಠವನ್ನು ಮರುಸ್ಥಾಪನೆ ಮಾಡಿದ್ದ ಚರಿತ್ರೆಯೇ ಇದೆ. ತಾಮ್ರದ ಗರಿಯಲ್ಲಿ ಶೃಂಗೇರಿಯಲ್ಲಿ ಚರಿತ್ರೆ ಇದೆ. ಇದು ಗೊತ್ತಿಲ್ಲದೇ ಮಾತನಾಡುವುದಾಗಿ ಆರೋಪಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿಗೆ ಟಾಂಗ್ ನೀಡಿರುವ ಅವರು, ಪಾಪ  ಮನ್‌ಮೋಹನ್ ಸಿಂಗ್, ಅವರು ಮಾತನಾಡುತ್ತಿರಲಿಲ್ಲ ಕೆಲಸ ಮಾಡುತ್ತಿದ್ದರು. ಈ ಮುಂಡೆದು ಬರಿ ಮಾತನಾಡುತ್ತಿದೆ ಹೊರತು ಕೆಲಸ ಮಾಡುತ್ತಿಲ್ಲ. ಭಾಷಣದಲ್ಲಿ ಕೇವಲ ಖಾಲಿ ದಿನ್, ಪರಿವರ್ತನ್ ಆಯೆಗೆ, ಅಚ್ಛೇ ದಿನ್ ಆಯೆಗೆ ಅಂತ ಹೇಳೋದೇ ಆಯ್ತು. ಆದರೇ ಅಚ್ಛೇ ದಿನ್ ಅರ್ಥನೆ ಬದಲಾಗಿದೆ. ತರಕಾರಿ ಮಾರುವ ಗಂಗಮ್ಮ ಡೆಬಿಟ್ ಕ್ರೆಡಿಟ್ ಕಾರ್ಡ್ ಕೊಟ್ರೆ ಎಲ್ಲಿ ಇಡಬೇಕು. ಮೀನು ಮಾರುವ ಹುಸೇನ್ ಸಾಬಿಗೆ ಕಾರ್ಡ್ ಕೊಟ್ರೆ ಮೀನಿನ ಬಾಯಲ್ಲಿ ಇಡೋಕೆ ಆಗುತ್ತಾ. ದಯವೇ ಧರ್ಮದ ಮೂಲವಯ್ಯ ಅಂತ ಬಸವಣ್ಣ ಹೇಳಿದಾರೆ. ಆ ದಯೆ ತೋರಿರುವುದು ಸಿದ್ದರಾಮಯ್ಯನವರೇ ಹೊರತು, ಯಡಿಯೂರಪ್ಪ ಅಲ್ಲ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com