ನಾ ಹೋದಲ್ಲೆಲ್ಲ ಪರಿವರ್ತನೆಯ ಗಾಳಿ ಬೀಸಿದೆ, ಈ ಬಾರಿ ಸುನಾಮಿ ಎಬ್ಬಿಸ್ತೇನೆ : ಅಮಿತ್ ಶಾ

ಚಾಮರಾಜನಗರ : ಕೊಳ್ಳೇಗಾಲದಲ್ಲಿ ಬಿಜೆಪಿಯ ಜನಶಕ್ತಿ ಸಮಾವೇಶ ನಡೆಯುತ್ತಿದ್ದು, ಅಮಿತ್ ಶಾ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ.

ಬಳಿಕ ಮಾತನಾಡಿದ ಅವರು, ನಾನು ರಾಜ್ಯದಲ್ಲಿ ಎಲ್ಲಿ ಹೋದರೂ ಅಲ್ಲಿ ಪರಿವರ್ತನೆ ಬಿರುಗಾಳಿ ಎಬ್ಬಿಸಿದ್ದೇನೆ. ನಾನು ಈ ಬಾರಿ ಪರಿವರ್ತನೆ  ಮಾಡೋದಿಲ್ಲ. ಈ ಬಾರಿ ಸುನಾಮಿ ಎಬ್ಬಿಸಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುತ್ತೇನೆ. ನಾನು ನವಶಕ್ತಿ ಸಮಾವೇಶಕ್ಕೆ ಹೋದ್ರೆ ಅದು ಏನೂ ಆಗಲ್ಲ ಅಂತಾರೆ. ಆದ್ರೆ  ನವಶಕ್ತಿ ಸಮಾವೇಶ ಅಂದ್ರೆ ಅದು ಬೂತ್ ನಲ್ಲಿ ಕಾ ರ್ಯಕರ್ತರ ಗೆಲ್ಲಿಸುವ ತಾಕತ್ತು ಅಂತಾ ಅವ್ರಿಗೆ ಗೊತ್ತಿಲ್ಲ ಎಂದಿದ್ದಾರೆ.

ನಾನು ಕೂಡ ಮೊದಲು ಬೂತ್ ಕಾರ್ಯಕರ್ತನಾಗಿದ್ದೆ. ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಾಗಿದ್ದೇನೆ. ಬಿಜೆಪಿಯಿಂದ ಮಾತ್ರ ಓರ್ವ ಸಾಮಾನ್ಯ ಕಾರ್ಯಕರ್ತನು ಕೂಡ ಪರಿಶ್ರಮದಿಂದ ಪಕ್ಷದ ಅಧ್ಯಕ್ಷನಾಗಬಹುದು ಪ್ರಧಾನಿಯಾಗಬಹುದು. ನವಶಕ್ತಿ ಸಮಾವೇಶವೆಂದರೆ ಅದು ಕೇವಲ 3 ಸಾವಿರ ಕಾರ್ಯಕರ್ತರ ಸಭೆ ಅಲ್ಲ. ಅದು ಓರ್ವ ಶಾಸಕನ್ನು ಗೆಲ್ಲಿಸಿಸುವ ಶಕ್ತಿಕೇಂದ್ರ ಎಂದಿದ್ದಾರೆ.

ನಾನು ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇನೆ. ರಾಜ್ಯದಲ್ಲಿ ಸಿ.ಎಂ ಹಲವಾರು ಹಿಂದು ಕಾರ್ಯಕರ್ತರ ಹತ್ಯೆ ಮಾಡಿಸಿದ್ದಾರೆ. ನಿಮ್ಮ ಸರ್ಕಾರ ಹೋದ ನಂತ್ರ ಬಿಎಸ್ ವೈ ಸರ್ಕಾರ ಬಂದಾಗ ಆ ಹತ್ಯೆಗಾರರನ್ನು ಹುಡುಕಿ ಶಿಕ್ಷೆ ಕೊಡಿಸುತ್ತೇನೆ. ಸಿದ್ದರಾಮಯ್ಯ ಎಲ್ಲದರಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಆದ್ರೂ‌ ನಮ್ಮ ಸರ್ಕಾರ ನಂ 1 ಸರ್ಕಾರ ಅಂತಾರೆ. ಆದ್ರೆ ಅವರಲ್ಲಿ ನಂ1 ಆಗಿರೋದು ಭ್ರಷ್ಟಾಚಾರದಲ್ಲಿ ಮಾತ್ರವೇ ಹೊರತು ಇತರ ಅಭಿವೃದ್ದಿ ವಿಷಯದಲ್ಲಿ ಅಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವನ್ನು ಕಿತ್ತೊಗೆಯಲು ಜೆಡಿಎಸ್ ಗೆ ಸಾಧ್ಯವಿಲ್ಲ.ಅದು ಬರಿ ಸ್ಪೀಡ್ ಬ್ರೇಕರ್ ಮಾತ್ರ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ  ಶಕ್ತಿ ಇರೋದು ಬಿಜೆಪಿಗೆ ಮಾತ್ರ. ನಾವೆಲ್ಲರು ಕಾಂಗ್ರೆಸ್  ಮುಕ್ತ ಭಾರತಕ್ಕೆ ಸಂಕಲ್ಪ ಮಾಡಬೇಕಿದೆ. ಈಗಾಗಲೇ ದೇಶದಲ್ಲಿ  ಬಹುತೇಕ ಕಡೆ ಬಿಜೆಪಿ ಸರ್ಕಾರವಿದೆ ಈ ಬಾರಿ ಕರ್ನಾಟಕದಲ್ಲಿ ಕೂಡ ಬಿಜೆಪಿ  ಸರ್ಕಾರ ಬರಲಿದೆ. ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ಹೋದರೆ ಉಳಿದ ಒಂದೇ ಒಂದು ಚಿಕ್ಕರಾಜ್ಯ ಅಂದ್ರೆ ಅದು ಪುದುಚೇರಿ ಮಾತ್ರ ಆಗಿರುತ್ತದೆ. ಅದಕ್ಕಾಗಿ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಗೆಲ್ಲಿಸುವಂತೆ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.

Leave a Reply

Your email address will not be published.