ಸುಳ್ಳು ಸುದ್ದಿ ಪ್ರಕಟ : ಪೋಸ್ಟ್ಕಾರ್ಡ್ ವೆಬ್ಸೈಟ್ ಮಾಲೀಕ ಮಹೇಶ್ ವಿಕ್ರಂ ಹೆಗಡೆ ಅರೆಸ್ಟ್
ಬೆಂಗಳೂರು : ಕೋಮು ಸೌಹಾರ್ದ ಹಾಲು ಮಾಡುವಂತಹ ಸುಳ್ಳು ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪೋಸ್ಟ್ ಕಾರ್ಡ್ ವೆಬ್ಸೈಟ್ನ ಮಾಲೀಕ ಮಹೇಶ್ ವಿಕ್ರಂ ಹೆಗಡೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇವರ ವಿರುದ್ದ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾರ್ಚ್ 18ರಂದು ಪೋಸ್ಟ್ಕಾರ್ಡ್ ವೆಬ್ಸೈಟ್ನಲ್ಲಿ ಜೈನಮುನಿ ಮಯಾಂಕ್ ಸಾಗರ್ ಜಿ ಅವರ ಮೇಲೆ ಮುಸ್ಲಿಂ ಯುವಕನೊಬ್ಬ ಹಲ್ಲೆ ಮಾಡಿದ್ದಾನೆ. ರಾಜ್ಯದ ಸಿದ್ದರಾಮಯ್ಯ ಸರ್ಕಾರದ ಆಡಳಿತಾವಧಿಯಲ್ಲಿ ಯಾರೊಬ್ಬರಿಗೂ ರಕ್ಷಣೆ ಇಲ್ಲ ಎಂದು ಬಿಂಬಿಸಿ ಫೋಟೋ ಸಹಿತ ಸುಳ್ಳು ಸುದ್ದಿ ಬಿತ್ತರಿಸಿದ್ದರು.
ಈ ಸಂಬಂಧ ವೆಬ್ಸೈಟ್ ಮಾಲೀಕ ಮಹೇಶ್ ವಿರುದ್ದ ಗಫರ್ ಬೇಗ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು, ಇವರ ವಿುದ್ದ ಐಪಿಸಿ ಸೆಕ್ಷನ್ 153 ಎ(ಧರ್ಮ, ಜನಾಂಗ, ಭಾಷೆ ಸೇರಿದಂತೆ ಅನೇಕ ಆಧಾರದ ಮೇಲೆ ಕೋಮುಭಾವನೆ , ದ್ವೇಷ ಬಿತ್ತುವುದು, ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೃತ್ಯ ಎಸಗುವುದು), 295 ಎ ಹಾಗೂ 120ಬಿ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹೇಶ್ರನ್ನು ಬಂಧಿಸಿದ್ದಾರೆ. ಇನ್ನಿಸುಳ್ಬ್ಬರು ಆರೋಪಿಗಳು ತಲೆ ಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.