ಪ್ಲೇ ಸ್ಟೋರ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಆ್ಯಪ್‌ ಡಿಲೀಟ್‌….ಇಲ್ಲಿದೆ ಕಾರಣ…!

ಬೆಂಗಳೂರು : ಕಾಂಗ್ರೆಸ್ ಆ್ಯಪ್‌ ಡಿಲೀಟ್‌ ಆದ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಅವರ ಆ್ಯಪ್‌ ಸಹ ಪ್ಲೇ ಸ್ಟೋರ್‌ನಿಂದ ಡಿಲೀಟ್ ಆಗಿದೆ.
ಸಿದ್ದರಾಮಯ್ಯ ಆ್ಯಪ್‌ನಿಂದ ಬಳಕೆದಾರರ ವೈಯಕ್ತಿಕ ಮಾಹಿತಿಗಳು ಮೈಸೂರಿನ ಖಾಸಗಿ ಕಂಪನಿಗೆ ರವಾನೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಆ್ಯಪನ್ನು ಡಿಲೀಟ್‌ ಮಾಡಲಾಗಿದೆ.
ಇತ್ತೀಚೆಗಷ್ಟೇ ಮೈಸೂರಿನ ಟೆಕ್ಕಿ ಶ್ರೀಹರ್ಷ ಪೆರ್ಲ ಎಂಬುವವರು ಸಿಎಂ ಸಿದ್ದರಾಮಯ್ಯ ಹೆಸರಿನ ಆ್ಯಪ್‌ ನನ್ನ ಖಾಸಗಿ ವಿವರಗಳನ್ನು ಮೈಸೂರಿನ ಇನ್‌ ಫೋಫೈನ್‌ ಎಂಬ ಕಂಪನಿಗೆ ರವಾನೆ ಮಾಡಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದ್ದು, ಕೂಡಲೆ ಆ್ಯಂಡ್ರಾಯ್ಡ್‌ ಪ್ಲೇ ಸ್ಟೋರ್‌ನಿಂದ ಆ್ಯಪನ್ನು ಡಿಲೀಟ್ ಮಾಡಲಾಗಿದೆ. ಈವರೆಗೆ ಸಿದ್ದರಾಮಯ್ಯ ಆ್ಯಪನ್ನು 30 ಸಾವಿರ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com