M.B ಪಾಟೀಲರನ್ನು ಪೀಸ್‌ ಪೀಸ್‌ ಮಾಡುತ್ತೇನೆ ಎಂದಿದ್ದ BJP ನಾಯಕಿಗೆ ಸಂಕಷ್ಟ

ವಿಜಯಪುರ : ಇದೇ ಮಾರ್ಚ್ 25 ರಂದು ವಿಜಯಪುರದಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮಾಡಿದ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ನಗರದ ದರ್ಬಾರ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ  ಸಮಾವೇಶದಲ್ಲಿ ಪ್ರಚೋದನಕಾರಿಯಾಗಿ ದಿವ್ಯಾ ಹಾಗರಗಿ ಭಾಷಣ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ರನ್ನು ಖಡ್ಗದಿಂದ ಪೀಸ್ ಪೀಸ್ ಮಾಡುತ್ತೇನೆ ಎಂದು ದಿವ್ಯಾ ಹಾಗರಗಿ ನೀಡಿದ ಹೇಳಿಕೆ ವಿವಾದಕ್ಕೆ ಒಳಗಾಗಿತ್ತು.
ಈ ಕುರಿತು ದಲಿತ ಮುಖಂಡ ಶ್ರೀನಾಥ್ ಪೂಜಾರಿ ವಿಜಯಪುರ ನಗರದ ಗೋಲಗುಂಬಜ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೆಲಸವನ್ನು ದಿವ್ಯಾ ಹಾಗರಗಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Leave a Reply

Your email address will not be published.