ಕಾಂಗ್ರೆಸ್‌ ನಿರ್ನಾಮ ಮಾಡಲು ರಾಹುಲ್‌ ಗಾಂಧಿ ಒಬ್ಬರೇ ಸಾಕು : ಮಧು ಬಂಗಾರಪ್ಪ

ಶಿವಮೊಗ್ಗ : ಸೋತವರಿಗೆ ಹಾಗೂ ಸೋಲುವವರ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡಲು ಆಗುವುದಿಲ್ಲ ಎಂದು ತಮ್ಮ ಸಹೋದರ ಕುಮಾರ ಬಂಗಾರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಸಂವಾದದಲ್ಲಿ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದು, ಸೂರಬ ಅಭಿವೃದ್ದಿಯಾಗಿಲ್ಲ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮಧು ಬಂಗಾರಪ್ಪ, ಕುಮಾರ ಬಂಗಾರಪ್ಪ ಓರ್ವ ಸ್ಯಾಡಿಸ್ಟ್. ತೀರ್ಥಹಳ್ಳಿಯಲ್ಲಿ ಬಿಜೆಪಿಯವರು ಅಡಿಕೆ ಬೆಳೆಗಾರರ ಸಮಾವೇಶ ಮಾಡಿದ್ದರು. ಅಡಿಕೆ ಬೆಳಗಾರರಿಗೆ ಮೋಸ ಮಾಡಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ.ಕೇಂದ್ರ ಸರ್ಕಾರ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿತ್ತು. ಸಮಾವೇಶ ದಲ್ಲಿ ಅಡಿಕೆ ಬೆಳಗಾರರನ್ನ ರಕ್ಷಣೆ ಮಾಡುವ ಯಾವುದೇ ಹೇಳಿಕೆಗಳು ಹೇಳಿಲ್ಲ. ಅಡಿಕೆ ಬೆಳಗಾರರ ಸಮಾವೇಶ ನೆಪದಲ್ಲಿ ಬಂದು ಇಬ್ಬರು ನಾಯಕರ ಸಂಧಾನ ಮಾಡಿ ಹೋಗಿದ್ದಾರೆ. ಅಡಿಕೆ ಬೆಳಗಾರರಿಗೆ ರಕ್ಷಣೆ ಮಾಡಲು ಜೆಡಿಎಸ್ ಪಕ್ಷ ಸದಾ ಸಿದ್ದ ಎಂದಿದ್ದಾರೆ.

ರಾಷ್ಟ್ರೀಯ ಪಕ್ಷಗಳು ಕರ್ನಾಟಕ ರಾಜ್ಯವನ್ನ ಹಗುರವಾಗಿ ತಗೆದುಕೊಳ್ಳಬೇಡಿ. ಭಾಷಣ ಮಾಡುವಾಗ ಮಹಾನ್ ನಾಯಕರ ಹೆಸರು ಹೇಳಿರುವ ನಾಯಕರು ಮಹದಾಯಿ ನೀರಾವರಿ ವಿಚಾರದ ಬಗ್ಗೆ ಮಾತನಾಡಲಿಲ್ಲ. ರಾಷ್ಟ್ರ ನಾಯಕರು ರಾಜಕೀಯಕ್ಕೆ ನಮ್ಮ ಮಾತೃಭಾಷೆಯನ್ನ ಬಳಸುತ್ತಿದ್ದಾರೆ. ದೊಡ್ಡದೊಡ್ಡ ನಾಯಕರ ಹೆಸರುಗಳನ್ನ ಭಾಷಣದಲ್ಲಿ ಹೇಳಿದರೆ ಮತ ಸಿಗುವುದಿಲ್ಲ. ರಾಜ್ಯಕ್ಕೆ ಏನು ಕೂಡುಗೆ ನೀಡಿದ್ದೇವೆ ಎನ್ನುವುದನ್ನ ತಿಳಿಯಬೇಕು. ಏಪ್ರಿಲ್ 5 ನೇ ತಾರೀಖಿನಂದು ಕುಮಾರಸ್ವಾಮಿಯವರು ಶಿಕಾರಿಪುರಕ್ಕೆ ಆಗಮಿಸಲಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ನಿರ್ಣಾಮ ಮಾಡುವುದಕ್ಕೆ ರಾಹುಲ್ ಗಾಂಧಿ ಒಬ್ಬರೆ ಸಾಕು. ನಾನು ಬೇರೆ ಶಾಸಕರ ಹಾಗೆ ಸರ್ಕಾರದಿಂದ ಕೋಟಿಗಟ್ಟಲೇ ಹಣ ತಂದಿದ್ದೆನೆ ಎಂದು ಬೋರ್ಡ್ ಹಾಕಿಕೊಳ್ಳುವುದಿಲ್ಲ ಎಂದಿದ್ದಾರೆ.

ಜೊತೆಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕುಮಾರ ಬಂಗಾರಪ್ಪ ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಮಾತನಾಡುವುದನ್ನ ಬಿಡಬೇಕು. ರಾಜ್ ಕುಮಾರ್ ಕುಟುಂಬ ಹಾಗೂ ನಮ್ಮ ಕುಟುಂಬ ಚನ್ನಾಗಿದ್ದೇವೆ. ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರಗಳು ಒಮ್ಮೆ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published.