ಪ್ರೀತಿಸಿ ಮದುವೆಯಾದ ತಪ್ಪಿಗೆ ಪೊಲೀಸ್‌ ಠಾಣೆಗೆ ಅಲೆದಾಡುತ್ತಿದೆ ಈ ಜೋಡಿ !

ಮೈಸೂರು : ಮನೆಯವರ ವಿರೋಧ ಲೆಕ್ಕಿಸದೆ ಪ್ರೀತಿಸಿದ ಯುವಕನ ವರಿಸಿದ ಯುವತಿಗೆ ಮನೆಯವರಿಂದಲೇ ಕೊಲೆ ಬೆದರಿಕೆ ಬಂದಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಪ್ರೇಮಿಗಳು ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ. ಬೆಂಗಳೂರಿನ ದೊಡ್ಡಕಲ್ಲಸಂಧ್ರ ನಿವಾಸಿ ವೀಣಾ ಹಾಗೂ ಮೈಸೂರು ದಟ್ಟಗಳ್ಳಿ ನಿವಾಸಿ ನಿತಿನ್ ಕುಮಾರ ಗೆ ಇಂತಹ ದುಃಸ್ಥಿತಿ ಬಂದಿದೆ. ಕಳೆದ 9 ತಿಂಗಳಿನಿಂದ ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ. ಜಾತಿ ಬೇರೆ ಆಗಿರೋದ್ರಿಂದ ವೀಣಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ವಿರೋಧವನ್ನ ಲೆಕ್ಕಿಸದ ವೀಣಾ ನಾಲ್ಕು ದಿನಗಳ ಹಿಂದೆ ಶ್ರೀ ರಂಗಪಟ್ಟಣದ ನಿಮಿಷಾಂಭ ದೇವಸ್ಥಾನದಲ್ಲಿ ನಿತಿನ್ ರನ್ನು ಮದುವೆಯಾಗಿ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿ ಮಾಡಿಸಿದ್ದಾಳೆ. ಮದುವೆ ಆದ ಸುದ್ದಿ ತಂದೆ ಮಾಯಿಗೌಡ ಗೆ ತಿಳಿದು ಪ್ರಿಯತಮನ ಮನೆಗೆ ರೌಡಿಗಳನ್ನ ಕಳುಹಿಸಿ ಗಲಾಟೆ ಮಾಡಿಸಿ ನಿತಿನ್ ಕುಮಾರ್ ಮೇಲೆ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ. ತಂದೆಯಿಂದ ಇಬ್ಬರಿಗೂ ಕೊಲೆ ಬೆದರಿಕೆ ಬಂದಿದೆ ಎಂದು ಆರೋಪಿಸಿರುವವ ವೀಣಾ ತನ್ನ ಗಂಡನ ಜೊತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ರಕ್ಷಣೆ ನೀಡುವಂತೆ ದೂರು ಕೊಟ್ಟಿದ್ದಾಳೆ. ಮುಂದೆ ತಮಗೇನಾದ್ರೂ ಅಪಾಯವಾದ್ರೆ ತಮ್ಮ ತಂದೆ ಮಾಯೀಗೌಡ ಕಾರಣವಾಗುತ್ತಾರೆಂದು ದೂರಿನಲ್ಲಿ ತಿಳಿಸಿದ್ದಾಳೆ.

Leave a Reply

Your email address will not be published.

Social Media Auto Publish Powered By : XYZScripts.com