ಅಂಬರೀಶ್‌ಗೆ ಎದುರಾಳಿಯಾದ ಐದು ರೂಪಾಯಿ ಡಾಕ್ಟ್ರು : ಗೆಲುವು ಯಾರದು ?

ಮಂಡ್ಯ : ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಂಡ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ನಟ ಅಂಬರೀಶ್ ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಐದು ರೂಪಾಯಿ ಡಾಕ್ಟರ್‌ ಎಂದೇ ಪ್ರಸಿದ್ದಿ ಪಡೆದಿರುವ ಶಂಕರೇಗೌಡರು ಅಖಾಡಕ್ಕಿಳಿದಿದ್ದಾರೆ.

ವೈದ್ಯಕೀಯ ಸೇವೆ ಜೊತೆ ಸಮಾಜಸೇವೆಯಲ್ಲೂ ತೊಡಗಿಕೊಂಡಿರುವ ಇವರು ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಈಗಾಗಲೆ ಮನೆ ಮನೆಗೆ ತೆರಳಿ ಪ್ರಚಾರ ಶುರುಮಾಡಿದ್ದಾರೆ. ಜಿಲ್ಲಾಪಂಚಾಯತ್‌ ಸದಸ್ಯತ್ವದ ಅವಧಿಯಲ್ಲಿನ ಸೇವೆಯನ್ನು ಪರಿಗಣಿಸಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಜೊತೆಗೆ ವೈದ್ಯರ ಪತ್ನಿ ಹಾಗೂ ಮಗಳು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಈ ಬಾರಿ ಅಂಬರೀಶ್ ಅವರಿಗೆ ಐದು ರೂಪಾಯಿ ಡಾಕ್ಟರು ಟಕ್ಕರ್‌ ಕೊಡುವುದಂತೂ ಸತ್ಯ ಎಂಬ ಮಾತು ಕೇಳಿಬರುತ್ತಿದೆ.

2 thoughts on “ಅಂಬರೀಶ್‌ಗೆ ಎದುರಾಳಿಯಾದ ಐದು ರೂಪಾಯಿ ಡಾಕ್ಟ್ರು : ಗೆಲುವು ಯಾರದು ?

Leave a Reply

Your email address will not be published.

Social Media Auto Publish Powered By : XYZScripts.com