ಹನಿಟ್ರ್ಯಾಪ್‌ ಮಾಡಿ 4.85ಲಕ್ಷ ಪಡೆದ್ಲು : ಸಿಂಗಲ್‌ ಸೆಟಲ್‌ಮೆಂಟ್‌ಗಾಗಿ ಈಗ ಮತ್ತೆ ಬ್ಲಾಕ್‌ಮೇಲ್‌

ಚಿಕ್ಕಮಗಳೂರು : ಬೆಂಗಳೂರಿನಲ್ಲಿ ನೆಲೆಸಿರೋ ಮೂಡಿಗೆರೆ ಮೂಲದ ಮಹಿಳೆಯಿಂದ ಚಿಕ್ಕಮಗಳೂರಿನ ಯುವಕನೊಬ್ಬ ಹನಿಟ್ರ್ಯಾಪ್‍ಗೆ ಒಳಗಾಗಿ 4.85 ಸಾವಿರ ಕಳೆದುಕೊಂಡು ಆಕೆಯಿಂದ ಮತ್ತೆ ಬ್ಲ್ಯಾಕ್ ಮೇಲ್‍ಗೆ ಒಳಗಾಗಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ನಗರದ ಕಲ್ಯಾಣ ನಗರದ ನಿವಾಸಿ ಗೌರಿ ಶಂಕರ್‌ಗೆ ಕಳೆದೊಂದು ವರ್ಷದ ಹಿಂದೆ ಫೇಸ್‍ಬುಕ್‍ನಲ್ಲಿ ಮೈತ್ರಿ ಎಂಬುವಳ ಪರಿಚಯವಾಗಿತ್ತು. ಸ್ನೇಹ ಪ್ರೀತಿಯಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ದೈಹಿಕ ಸಂಪರ್ಕ ಕೂಡ ನಡೆದಿತ್ತು. ಗೌರಿಶಂಕರ್‌ನಿಂದ ಆಗಾಗ್ಗೆ ಒಟ್ಟು 4 ಲಕ್ಷದ 85 ಸಾವಿರ ಹಣ ಕಿತ್ತಿರೋ ಮೈತ್ರಿ ಸಿಂಗಲ್ ಸೆಟೆಲ್‌ಮೆಂಟ್‌ಗಾಗಿ ಮತ್ತೆ ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಳೆ. ಆಕೆಗೆ ಹಣ ಕೊಟ್ಟು ಸುಸ್ತಾಗಿರೋ ಗೌರಿಶಂಕರ್ ಮಾನಸಿಕ ನೆಮ್ಮದಿಗಾಗಿ ಮಾಧ್ಯಮಗಳು ಹಾಗೂ ಪೊಲೀಸರ ಮೊರೆ ಹೋಗಿದ್ದಾನೆ.

ಮೈತ್ರಿಯದ್ದು ಇದೊಂದೆ ಕೇಸಲ್ಲ. ಬೆಂಗಳೂರಿನ ಪೀಣ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರೋ ಮೈತ್ರಿ ಪಕ್ಕದ ಮಳಿಗೆ ವೈದ್ಯ ಡಾ.ಬಿರಾದಾರ್ ಎಂಬುವರಿಗೂ ಇದೇ ರೀತಿ ಬ್ಲಾಕ್ ಮೇಲ್ ಮಾಡ್ತಿದ್ದಾಳೆ. ಅವರಿಂದಲೂ ಈಗಾಗ್ಲೆ 9 ಲಕ್ಷ ಹಣ ಕಿತ್ತಿರೋ ಮೈತ್ರಿ ಅವರಿಗೆ ಸಿಂಗಲ್ ಸೆಟಲ್‌ಮೆಂಟ್‌ಗೆ 15 ಲಕ್ಷ ಕೇಳ್ತಿದ್ದಾಳೆ. ಹಾವೇರಿ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದ ಜನರಿಗೆ ಇದೇ ರೀತಿ ಮೋಸ ಮಾಡಿರೋ ಎಲ್ಲಾ ದಾಖಲೆಗಳು ಗೌರಿಶಂಕರ್ ಬಳಿ ಇದೆ. ಈಕೆಯಿಂದ ಗೌರಿ ಶಂಕರ್ ಕೆಲಸ ಮಾಡ್ತಿದ್ದ ಎಸ್ಟೇಟ್ ಮಾಲೀಕರು ಕೆಲಸದಿಂದ ತೆಗೆದುಹಾಕಿದ್ದಾರೆ.

ಈಕೆ ಮೇಲೆ ಬೆಂಗಳೂರಿನ ಪೀಣ್ಯ ಠಾಣೆಯಲ್ಲಿ ಎರಡು ಪ್ರಕರಣ ಕೂಡ ದಾಖಲಾಗಿದೆ. ಈಕೆಯ ಗಂಡನೇ ಈಕೆ ಮೇಲೆ ದೂರು ದಾಖಲಿಸಿದ್ದಾನೆ. ಮಂಜುನಾಥ್ ಎಂಬುವನು ಹಣ ನೀಡದ ಕಾರಣ ಆತನ ಮೇಲೂ ರೇಪ್ ಕೇಸ್ ನೀಡಿದ್ದಾಳಂತೆ ಈ ಮೈತ್ರಿ. ಇದೀಗ ಈಕೆಯಿಂದ ಸಂಸಾರ, ಉದ್ಯೋಗ, ಮಾನಸಿಕ ನೆಮ್ಮದಿ ಕಳೆದುಕೊಂಡಿರೋ ಗೌರಿಶಂಕರ್ ಮಾಧ್ಯಮಗಳು ಹಾಗೂ ಪೊಲೀಸರ ಮೊರೆ ಹೋಗಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com