ಅಮಿತ್ ಶಾ ಮಾತಿಗೂ ಕ್ಯಾರೆ ಎನ್ನದ ಯದುವೀರ್‌ : ಚುನಾವಣಾ ಪ್ರಚಾರದ ಬಗ್ಗೆ ಹೇಳಿದ್ದೇನು ?

ಮೈಸೂರು : ಮೈಸೂರು ಭಾಗದಲ್ಲಿ ಬಿಜೆಪಿ ಪರ ಮತ ಕೇಳುವಂತೆ ಮೈಸೂರಿನ ರಾಜ ಯದುವೀರ್‌ ಒಡೆಯರ್‌ಗೆ ಅಮಿತ್‌ ಶಾ ಮನವಿ ಮಾಡುವವುದಾಗಿ ಹೇಳಲಾಗಿತ್ತು. ಆದರೆ ಈ ಸಂಬಂಧ ಯದುವೀರ್ ಸ್ಪಷ್ಟನೆ ನೀಡಿದ್ದು, ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ಮೈಸೂರಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡುವಂತೆ ಅಮಿತ್ ಶಾ ಯದುವೀರ್‌ ಅವರನ್ನು ಮನವಿ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದಕ್ಕೆ ಯದುವೀರ್‌ ಸ್ಪಷ್ಟನೆ ನೀಡಿದ್ದು, ನಾನು ರಾಜಕೀಯಕ್ಕೆ ಬರುವುದಿಲ್ಲ. ಮಾರ್ಚ್‌ 30ರಂದು ಅಮಿತ್ ಶಾ ಅರಮನೆಗೆ ಬರುತ್ತಿರು ವಿಚಾರ ನನಗೆ ತಿಳಿದಿಲ್ಲ. ಸಮಾಜಸೇವೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ಯಾವುದೇ ಪಕ್ಷದ ಪರವಾಗಿಯೂ ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com