ಬಾಲ್ ಟ್ಯಾಂಪರಿಂಗ್ ಪ್ರಕರಣ : ಸ್ಟೀವ್ ಸ್ಮಿತ್, ವಾರ್ನರ್ ಗೆ 1 ವರ್ಷ ನಿಷೇಧ

ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸೀ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಗೆ ಕ್ರಿಕೆಟ್ ಆಸ್ಟ್ರೇಲಿಯಾ 1 ವರ್ಷ ನಿಷೇಧ ಹೇರಿದೆ. ಬಾಲ್ ಟ್ಯಾಂಪರಿಂಗ್ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಮೇಲೆ 9 ತಿಂಗಳು ನಿಷೇಧ ಹೇರಿದೆ.

ಇದಕ್ಕೂ ಮುನ್ನ ಐಸಿಸಿ ಸ್ಟೀವ್ ಸ್ಮಿತ್ ಮೇಲೆ 1 ಪಂದ್ಯ ನಿಷೇಧ ಹಾಗೂ ಪಂದ್ಯದ ಸಂಭಾವನೆಯ ಶೇಕಡಾ 100 ರಷ್ಟು ದಂಡವಾಗಿ ವಿಧಿಸಲಾಗಿತ್ತು. ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಮೇಲೆ ಪಂದ್ಯದ ಶೇಕಡಾ 75 ರಷ್ಟು ದಂಡ ಹೇರಲಾಗಿತ್ತು.

34 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿರುವ ಸ್ಟೀವ್ ಸ್ಮಿತ್ 18 ರಲ್ಲಿ ಜಯ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ ಸೋಲು ಕಂಡು, 6 ನ್ನು ಡ್ರಾ ಮಾಡಿಕೊಂಡಿತ್ತು.

74 ಟೆಸ್ಟ್ ಪಂದ್ಯಗಳನ್ನಾಡಿರುವ ಎಡಗೈ ಆರಂಭಿಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ 8540 ರನ್ ಗಳಿಸಿದ್ದಾರೆ. ವಾರ್ನರ್ 21 ಶತಕ ಹಾಗೂ 29 ಅರ್ಧ ಶತಕ ಬಾರಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com