ಸಿದ್ದು ಸೋತು ಮನೆಯಲ್ಲಿ ಆರಾಮಾಗಿರಲಿ ಎಂಬುದೇ ನನ್ನ ಆಸೆ : ಈಶ್ವರಪ್ಪ

ಶಿವಮೊಗ್ಗ : ಸಿದ್ದರಾಮಯ್ಯ ಸಿಎಂ ಆದಾಗಿನಿಂದ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ. ಗೋವು ಕಡಿಯಲು ನಮಗೆ ಮತ ನೀಡಿ ಅಂತ ಈ ಬಾರಿ ಸಿದ್ದರಾಮಯ್ಯ ಕೇಳಲಿ ಎಂದು ವಿಪಕ್ಷ ನಾಯಕ ಕೆ.ಎಸ್‌ ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಹಿಂದೂಳಿದ ವರ್ಗದವರಿಗೆ ಎಷ್ಟು ಹಣ ನೀಡಿದಿರಿ, ಬಿಎಸ್ ವೈ ಎಷ್ಟು ಹಣ ಖರ್ಚು ಮಾಡಿದ‌್ದರು ಎಂದು ಶ್ವೇತ ಪತ್ರ ಬಿಡುಗಡೆ ಮಾಡಲಿ. ಚುನಾವಣೆ ಘೋಷಣೆಯಾಗಿದೆ, ಸಂತೋಷದಿಂದ ಸ್ವಾಗತ ಮ‌‌ಾಡುತ್ತೇವೆ. ಚುನಾವಣೆಗೆ ಸಿದ್ದವಾಗಿದ್ದೇವೆ. ಹಿಂದುಳಿದವರ ಸಂವಿಧಾನ ಬದ್ದ ಹಕ್ಕನ್ನು ಮೋದಿ ಸರ್ಕಾರ ರಾಜ್ಯ ಸಭೆಯ ಅನುಮೋದನೆ ಪಡೆದು ಜಾರಿಗೆ ತರಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದಿದ್ದಾರೆ.

ಏಪ್ರಿಲ್ 3 ರಂದು ಕಾಗಿನೆಲೆಯಲ್ಲಿ ಹಿಂದೂಳಿದವರ ಸಮಾವೇಶಕ್ಕೆ ಅಮಿತ ಷಾ ಬರುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗ ಸೇರಿ 224 ಕ್ಷೇತ್ರಗಳಲ್ಲಿ ಸರ್ವೆ ನಡೆಯುತ್ತಿದೆ. ಬಳಿಕ ಟಿಕೆಟ್‌ ಘೋಷಣೆಯಾಗುತ್ತದೆ. ಕಾಂಗ್ರೆಸ್ ಕೆಲವರು ಬಿಜೆಪಿಗೆ ಬರಲು ಉತ್ಸುಕರಾಗಿದ್ದಾರೆ. ಸಿದ್ದು ಸೋತು ಮನೆಯಲ್ಲಿ ಆರಾಮವಾಗಿ ಇರಲಿ ಎಂಬುದೆ ನನ್ನ ಆಸೆ. ಸರ್ವೆಯಲ್ಲಿ ರುದ್ರೇಗೌಡರಿಗೆ ಟಿಕೆಟ್ ನೀಡಿದ್ರೆ ನಾನೇ ನಿಂತು  ಅವರನ್ನು ಗೆಲ್ಲಿಸುತ್ತೇನೆ.
ನಮ್ಮದು ಬಿಜೆಪಿ ಪಕ್ಷ. ಹೇಳಿದಂತೆ ನಡೆದು ಕೊಳ್ಳುವುದಾಗಿ ಹೇಳಿದ್ದಾರೆ

ಅಮಿತ ಷಾ ರವರಿಗೆ ನನ್ನ ಹಾಗೂ ಬಿಎಸ್ ವೈ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಬಿಎಸ್ ವೈ ಅಣ್ಣ ತಮ್ಮಂದಿರು ಇದ್ದಂತೆ. ಅಮಿತಾ ಷಾ ರವರಿಗೆ ನಮ್ಮಿಬ್ಬರ ಬಗ್ಗೆ ಇದ್ದ ಅನುಮಾನ ಶಿವಮೊಗ್ಗಕ್ಕೆ ಬಂದ ಮೇಲೆ ಬಗೆಹರಿದಿರುವುದಾಗಿಯೂ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com