ಪಾಕಿಸ್ತಾನ ಪ್ರಧಾನಿ ಶಾಹಿದ್‌ ಖಕನ್‌ ಅಬ್ಬಾಸಿಯ ಕೋಟು ಬಿಚ್ಚಿಸಿದ ಅಮೆರಿಕ !

ವಾಷಿಂಗ್ಟನ್‌ : ಪಾಕಿಸ್ತಾನ ಪ್ರಧಾನಿ ಶಾಹಿದ್‌ ಖಕನ್‌ ಅಬ್ಬಾಸಿ ಅವರನ್ನು ಅಮೆರಿಕ ನಿಲ್ದಾಣದಲ್ಲಿ ನಿಲ್ಲಿಸಿ ತಪಾಸಣೆ ನಡೆಸಲಾಗಿದ್ದು, ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದೆ.

ಅಮೆರಿಕದಲ್ಲಿ ಅಬ್ಬಾಸಿ ಅವರ ಕೋಟು ತೆಗೆಸಿ ತಪಾಸಣೆ ಮಾಡುತ್ತಿರುವ ವಿಡಿಯೋವೊಂದನ್ನು ಪಾಕಿಸ್ತಾನ ಮಾಧ್ಯಮ ಪ್ರಸಾರ ಮಾಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೆ ಈ ಮೂಲಕ ಅಮೆರಿಕ ಪಾಕಿಸ್ತಾನಕ್ಕೆ ಅವಮಾನ ಮಾಡಿರುವುದಾಗಿ ಪಾಕ್ ಮಾಧ್ಯಮಗಳು ಕೆಂಡ ಕಾರಿವೆ.

ಕಳೆದ ವಾರ ಅಬ್ಬಾಸಿ ತಮ್ಮ ಸಹೋದರಿಯನ್ನು ಭೇಟಿ ಮಾಡಲು ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ್ ಅವರನ್ನೂ ಭೇಟಿ ಮಾಡಿದ್ದರು. ಖಾಸಗಿ ವಿಮಾನದಲ್ಲಿ ತೆರಳಿದ್ದ ಅಬ್ಬಾಸಿಯವರನ್ನು ಭದ್ರತಾ ಸಿಬ್ಬಂದಿ ಕೋಟು ತೆಗೆಸಿ ತಪಾಸಣೆ ನಡೆಸಿದ್ದರು ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.

ಈಗಾಗಲೆ ಅಮೆರಿಕ, ಪಾಕಿಸ್ತಾನಕ್ಕೆ ಸಾಕಷ್ಟು ಶಾಕ್‌ ನೀಡಿದ್ದು, ಆರ್ಥಿಕವಾಗಿಯೂ ಪಾಕಿಸ್ತಾನಕ್ಕೆ ಸಹಾಯ ಮಾಡುವುದಕ್ಕೆ ತಡೆ ಹಿಡಿದಿದೆ. ಇವುಗಳ ಮಧ್ಯೆ ಪಾಕಿಸ್ತಾನ ಪ್ರಧಾನಿಯ ಕೋಟು ತೆಗೆಸಿ ತಪಾಸಣೆ ಮಾಡಿದ್ದು, ಪಾಕ್‌ ತಲೆತಗ್ಗಿಸುವಂತಾಗಿದೆ.

Leave a Reply

Your email address will not be published.