ಮಗನ ಸಾವಿನಿಂದ ಖಿನ್ನತೆಗೊಳಗಾಗಿದ್ದ ವೈದ್ಯ ದಂಪತಿ ನೇಣಿಗೆ ಶರಣು

ಮೈಸೂರು : ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ವೈದ್ಯ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ‌. ಮೈಸೂರಿನ ಸರಸ್ವತಿಪುರಂನ ನಿವಾಸಿಯಾದ ಡಾ.ಸತೀಶ್. ಡಾ.ವೀಣಾ ದಂಪತಿ ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಮೈಸೂರಿನ ಕುಕ್ಕರಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಗ ಮೃತಪಟ್ಟಿದ್ದನು‌.

ಈ ಘಟನೆ ಬಳಿಕ ದಂಪತಿ ಖಿನ್ನತೆಗೆ ಒಳಗಾಗಿದ್ದರು. ಏಕೈಕ ಮಗನನ್ನು ಕಳೆದುಕೊಂಡ ಬಳಿಕ ಜೀವನದಲ್ಲಿ ಜಿಗುಪ್ಸೆ ಉಂಟಾಗಿತ್ತು. ಇದರಿಂದ ಹೊರ ಬರುವ ಸಲುವಾಗಿಯೇ ಸಾಕಷ್ಟು ಸಮಾಜ ಸೇವೆ ಕಾರ್ಯಗಳಲ್ಲಿ ಈ ದಂಪತಿ ತೊಡಗಿಕೊಂಡಿದ್ದರು ಎನ್ನಲಾಗಿದೆ.

ಇಂದು ಮದ್ತಾಹ್ನ 1.30ರ ಸುಮಾರಿಗೆ ಸರಸ್ವತಿ ಪುರಂನ ಸ್ವಗೃಹದಲ್ಲಿ ಈ ವೈದ್ಯ ದಂಪತಿ ನೇಣಿಗೆ ಶರಣಾಗಿದ್ದಾರೆ. ಸಾಯುವಾಗಲು ಈ ದಂಪತಿ ಒಬ್ಬರನೊಬ್ಬರು ಅಪ್ಪಿಕೊಂಡು ನೇಣು ಬಿಗಿದುಕೊಂಡಿದ್ದಾರೆ‌ .ನೆರೆಹೊರೆಯವರಿಂದ ಸುದ್ದಿ ತಿಳಿದ ಪೋಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com