ಗಾಯಗೊಂಡ ಪತಿಯ ಭೇಟಿಗೆ ಬಂದ ಹಸೀನ್ : ಪತ್ನಿಗೆ ಶಮಿ ಮಾಡಿದ್ದೇನು..?

ಟೀಮ್ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಡೆಹ್ರಾಡೂನ್ ನಿಂದ ದೆಹಲಿಗೆ ತೆರಳುವ ಮಾರ್ಗದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದರು. ತಲೆಗೆ ಪೆಟ್ಟಾದ ಕಾರಣ ಶಮಿ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಗಾಯಗೊಂಡಿರುವ ಪತಿಯನ್ನು ನೋಡಲು ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ವೇಗದ ಬೌಲರ್ ಶಮಿ ತಮ್ಮ ಪತ್ನಿಯನ್ನು ಭೇಟಿಯಾಗಲು ನಿರಾಕರಿಸಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಘಟನೆ ಬಗ್ಗೆ ಮಾತನಾಡಿರುವ ಹಸೀನ್ ಜಹಾನ್ ‘ ಅಪಘಾತದಲ್ಲಿ ಗಾಯಗೊಂಡಿರುವ ಶಮಿಯನ್ನು ನೋಡಲು ನಾನು ಬಂದಿದ್ದೆ. ಆದರೆ ಶಮಿ ನನ್ನನ್ನು ಭೇಟಿಯಾಗಲು ನಿರಾಕರಿಸಿದರು. ಅಲ್ಲದೇ ‘ ಕೋರ್ಟ್ ನಲ್ಲಿಯೇ ಬಂದು ನಿನ್ನನ್ನು ಎದುರಿಸುತ್ತೇನೆ ‘ ಎಂದು ನನಗೆ ಬೆದರಿಕೆಯನ್ನು ಒಡ್ಡಿದ್ದಾರೆ ‘ ಎಂದಿದ್ದಾರೆ.

Image result for mohammed shami daughter

‘ ಮಗಳು ಆಯರಾ ಜೊತೆ ಶಮಿ ಕೆಲ ಹೊತ್ತು ಆಟವಾಡಿದರು. ಆದರೆ ನನ್ನನ್ನು ಕೊಂಚವೂ ಗಮನಿಸಲಿಲ್ಲ. ಇದೇ ವೇಳೆಯಲ್ಲಿ ಶಮಿಯ ತಾಯಿ ಬಾಡಿಗಾರ್ಡ್ ತರಹ ವರ್ತಿಸುತ್ತಿದ್ದರು ‘ ಎಂದಿದ್ದಾರೆ.

Image result for mohammed shami daughter

ಕೆಲದಿನಗಳ ಹಿಂದೆ ಹಸೀನ್ ಜಹಾನ್ ಪತಿ ಶಮಿ ಮೇಲೆ ಕಿರುಕುಳ, ಮೋಸದ ಆರೋಪವನ್ನು ಹೊರಿಸಿದ್ದರು. ನಂತರ ಶಮಿ ಮೇಲೆ ‘ಕೊಲೆ ಯತ್ನ’ ದ ಪ್ರಕರಣ ಸಹ ದಾಖಲಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com