7 ತಿಂಗಳ ಗರ್ಭಿಣಿ ವಿದ್ಯಾರ್ಥಿನಿಯಿಂದ ನೃತ್ಯ ಮಾಡಿಸಿ ಅಪಹಾಸ್ಯ ಮಾಡಿದ ಪ್ರಾಧ್ಯಾಪಕರು !

ರಾಯ್‌ಪುರ : ಛತ್ತೀಸ್‌ಗಢದ ಖಾಸಗಿ ಬಿಎಡ್‌ ಕಾಲೋಜೊಂದರಲ್ಲಿ ಗರ್ಭಿಣಿಯಾಗಿದ್ದ ವಿದ್ಯಾರ್ಥಿನಿಯ ಜೊತೆ ಪ್ರಾಧ್ಯಾಪಕರು ಅಮಾನವೀಯವಾಗಿ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಪ್ರತಿಭಾ ಮಿಂಜ್‌ ಎಂಬ 24 ವರ್ಷದ ವಿದ್ಯಾರ್ಥಿನಿ ಮಿಂಜ್‌, ಸಂತ್‌ ಹರ್ಕೇವಾಲ್‌ ಬಿ.ಎಡ್‌ ಕಾಲೇಜಿನಲ್ಲಿ ಓದುತ್ತಿದ್ದು, 7 ತಿಂಗಳ ಗರ್ಭಿಣಿಯಾಗಿದ್ದರು. ಇವರು 2017ರಲ್ಲಿ ಕಾಲೇಜಿಗೆ ಸೇರಿಕೊಂಡಿದ್ದು, ಈ ವೇಳೆ ಬಿಎಡ್‌ ಕೋರ್ಸ್ ಮುಗಿಯುವವರೆಗೆ ಗರ್ಭ ಧರಿಸುವಂತಿಲ್ಲ ಎಂಬ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದರು. ಆದರೆ ಓದುವ ಹಂಬಲವಿದ್ದ ಪ್ರತಿಭಾ, ಕಾಲೇಜಿಗೆ ಸೇರುವ ಸಮಯದಲ್ಲಿ 3 ತಿಂಗಳ ಗರ್ಭಿಣಿಯಾಗಿದ್ದರು.

ದಿನಗಳದಂತೆ ಈ ವಿಚಾರ ಪ್ರಾದ್ಯಾಪಕರಿಗೆ ತಿಳಿದಿದ್ದು, ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆಯಲಿದ್ದ ಪರೀಕ್ಷೆಗೆ ಕೂರಲು ಅವಕಾಶ ನೀಡಲು ನಿರಾಕರಿಸಿದ್ದಾರೆ. ಆದರೆ ಪ್ರತಿಭಾ ಗೋಗರೆದಾಗ ಇದೇ ಸಂದರ್ಭವನ್ನು ಬಳಸಿಕೊಂಡ ಪ್ರಾಧ್ಯಾಪಕರು ಪ್ರತಿಭಾಗೆ ನೃತ್ಯ ಮಾಡಲು ಹೇಳಿ ಅವಮಾನಿಸಿದ್ದಾರೆ.

ಗರ್ಭಿಣಿಯಾದ ಕಾರಣ ವಿನಾಯಿತಿ ನೀಡುವಂತೆ ಬೇಡಿಕೊಂಡರೂ ಅದಕ್ಕೆ ಒಪ್ಪದೆ, ನೃತ್ಯ ಮಾಡಿದರೆ ಮಾತ್ರ ಅಂಕ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬೇರೆ ದಾರಿ ಕಾಣದೆ ಪ್ರತಿಭಾ ನೃತ್ಯ ಮಾಡಿದ್ದಾರೆ. ಇದನ್ನು ನೋಡಿ ಪ್ರಾಧ್ಯಾಪಕರು ಅಪಹಾಸ್ಯ ಮಾಡಿದ್ದಾರೆ.

ಫೆಬ್ರವರಿ 4ರಂದು ಪ್ರತಿಭಾಗೆ ಹೆರಿಗೆಯಾಗಿದ್ದು, ಅಲ್ಲಿಯವರೆಗೂ ಆಕೆ ಕಾಲೇಜಿಗೆ ಹೋಗಿದ್ದಾರೆ. ಶೇ. 94ರಷ್ಟು ಹಾಜರಾತಿ ಹೊಂದಿದ್ದಾರೆ. ಶಿಕ್ಷಕರ ಅಮಾನವೀಯ ನಡೆ ವಿಚಾರ ಬೆಳಕಿಗೆ ಬಂದಿದ್ದು, ಪ್ರಾಧ್ಯಾಪಕರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಪ್ರಾಂಶುಪಾಲರು ಭರವಸೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com