ಪ್ರಧಾನಿ ಮೋದಿ ಬಡವರಿಗೆ, ದೀನರಿಗೆ ಏನೂ ಮಾಡಿಲ್ಲ ಎಂದ BJP ನಾಯಕ ಪ್ರಹ್ಲಾದ್ ಜೋಷಿ !!

ಚಳ್ಳಕೆರೆ : ಪ್ರಧಾನಿ ಮೋದಿಯವರು ಬಡವರಿಗೆ, ದೀನ ದಲಿತರಿಗೆ ಏನೂ ಮಾಡುವುದಿಲ್ಲ, ಅವರಿಂದ ದೇಶದ ಅಭಿವೃದ್ಧಿಯಾಗಿಲ್ಲ ಎಂದು ಬಿಜೆಪಿ ಸಂಸದ ಪ್ರಹ್ಲಾದ್‌ ಜೋಷಿ ಹೇಳಿದ್ದಾರೆ.

ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಿಂದಿಯಲ್ಲಿ ಮಾಡುವ ಭಾಷಣವನ್ನು ಸಂಸದ ಪ್ರಹ್ಲಾದ್ ಜೋಷಿ ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದರು. ಈ ವೇಳೆ ಅಮಿತ್ ಶಾ, ದೀನ ದಲಿತರಿಗೆ ಸಿದ್ದರಾಮಯ್ಯ ಏನೂ ಮಾಡಿಲ್ಲ. ಅವರ ಸರ್ಕಾರಾವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಬದಲಾವಣೆ, ಅಭಿವೃದ್ಧಿಯಾಗಿಲ್ಲ ಎಂದಿದ್ದರು.

ಇದನ್ನ ಕನ್ನಡಕ್ಕೆ ಅನುವಾದ ಮಾಡುವಾಗ ಸಿದ್ದರಾಮಯ್ಯ ಬದಲು ಮೋದಿ ಅವರ ಹೆಸರನ್ನು ಬಳಸಿದ್ದು, ಬಳಿಕ ಅದನ್ನು ಸರಿಮಾಡುವ ಗೋಜಿಗೆ ಹೋಗಲಿಲ್ಲ.

 

Leave a Reply

Your email address will not be published.