ಛತ್ತೀಸ್‌ಗಢ : ಶಂಕಿತ ಮಾವೋವಾದಿಗಳಿಂದ BJP ನಾಯಕನ ಹತ್ಯೆ !

ರಾಯ್‌ಪುರ : ಛತ್ತೀಸ್‌ಗಢದಲ್ಲಿ ಶಂಕಿತ ಮಾವೋವಾದಿಗಳು ಬಿಜೆಪಿ ಮುಖಂಡರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ಬಿಜೆಪಿ ನಾಯಕನನ್ನು ಬಿಜೆಪಿಯ ಯುವ ಘಟಕದ ಅಧ್ಯಕ್ಷ ಜಗದೀಶ್‌ ಕೊಂದ್ರಾ ಎಂದು ಹೆಸರಿಸಲಾಗಿದೆ. ಜಗದೀಶ್‌ ಅವರ ಮನೆಗೆ ನಾಲ್ವು ದುಷ್ಕರ್ಮಿಗಳು ಆಗಮಿಸಿದ್ದು, ಕತ್ತಿಯಿಂದ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ರಕ್ತಸಿಕ್ತವಾಗಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಸಾವಿಗೀಡಾಗಿರುವುದಾಗಿ ಮೂಲಗಳು ವರದಿ ಮಾಡಿವೆ. ಮಾವೋವಾದಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಆರೋಪಿಗಳ ಪತ್ತೆಗಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಯುವ ನಾಯಕನ ಸಾವಿಗೆ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com