ದಾಳಿ ಮಾಡೋ ನೆಪದಲ್ಲಿ ಬ್ಯೂಟಿ ಪಾರ್ಲರ್‌ಗೆ ನುಗ್ಗಿದ ಪೇದೆಗಳು ಮಾಡಿದ್ದು ಬೇರೇನೇ…!

ಬೆಂಗಳೂರು : ಕಾಯುವ ಪೊಲೀಸರೇ ಕಳ್ಳರಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದಾಳಿ ಮಾಡುವ ನೆಪದಲ್ಲಿ ಬ್ಯೂಟಿ ಪಾರ್ಲರ್‌ಗೆ ನುಗ್ಗಿ ಹಣ ದೋಚಿದ್ದಾರೆ. ಬಾಣಸವಾಡಿಯಲ್ಲಿ ಘಟನೆ ನಡೆದಿದ್ದು, ಹೆಣ್ಣೂರು ಪೊಲೀಸ್ ಠಾಣೆಯ ಪೇದೆಗಳಾದ ವಿಠ್ಠಲ್‌ ಹಾಗೂ ಫಾರೂಕ್‌ ಬ್ಯೂಟಿ ಪಾರ್ಲರ್ ಒಂದರ ಮೇಲೆ ದಾಳಿ ಮಾಡಲು ಬಂದು ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಆದರೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಅಲ್ಲಿದ್ದ 28 ಸಾವಿರ ರೂ ಜೊತೆಗೆ ಮೊಬೈಲ್ ಫೋನ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಬ್ಯೂಟಿ ಪಾರ್ಲರ್‌ ಸಿಬ್ಬಂದಿ ಆರೋಪಿಸಿದ್ದಾರೆ.

ಈ ಸಂಬಂಧ ಪಾರ್ಲರ್‌ ಸಿಬ್ಬಂದಿ ಬಾಣಸವಾಡಿ ಠಾಣೆಗೆ ದೂರು ನೀಡಿದ್ದು,  ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.