‘ಬಾಹುಬಲಿ’ಯ ಜೊತೆ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಹೋಗಲಿದ್ದಾರೆ ನಿರ್ದೇಶಕ “ರಾಜಮೌಳಿ” !

ಭಾರತದ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಬಾಹುಬಲಿ ಸಿನಿಮಾ ಬಾಕ್ಸ್ ಆಫೀಸ್‌ ಚಿಂದಿ ಉಡಾಯಿಸಿರುವುದು ಎಲ್ಲರಿಗೂ ತಿಳಿದಿದೆ. ಭಾರತದಲ್ಲಿ ಪಡೆದ ಯಶಸ್ಸಿನ ಬಳಿಕ ವಿದೇಶದಲ್ಲೂ ಹವಾ ಸೃಷ್ಠಿಸಿತ್ತು.

ಈಗ ಇಡೇ ಬಾಹುಬಲಿ ಮತ್ತೊಂದು ಗೌರವಕ್ಕೆ ಪಾತ್ರವಾಗಿದ್ದು, ಶೀಘ್ರದಲ್ಲೇ ಪಾಕಿಸ್ತಾನದಲ್ಲಿ ನಡೆಯುವ ಪಾಕಿಸ್ತಾನ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗವಹಿಸುತ್ತಿರುವುದಾಗಿ ರಾಜಮೌಳಿ ಟ್ವೀಟ್ ಮಾಡಿದ್ದಾರೆ.

ಬಾಹುಬಲಿ ಸಿನಿಮಾ ನನಗೆ ಅದೆಷ್ಟೋ ದೇಶಗಳನ್ನು ಸುತ್ತುವ ಅವಕಾಶ ಮಾಡಿಕೊಟ್ಟಿದೆ. ಅಷ್ಟೇ ಅಲ್ಲದೆ ಈಗ ಪಾಕಿಸ್ತಾನಕ್ಕೂ ಹೋಗುತ್ತಿದ್ದೇನೆ. ಕರಾಚಿಯಲ್ಲಿ ಪಾಕಿಸ್ತಾನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯಲಿದ್ದು, ನನ್ನನ್ನು ಆಹ್ವಾನಿಸಿದದಾರೆ. ಇದಕ್ಕಾಗಿ ಧನ್ಯವಾದ ಸಲ್ಲಿಸುವುದಾಗಿ ರಾಜಮೌಳಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com