BSY ನಂ.1 ಭ್ರಷ್ಟ ಅಂತ ಯಾರೋ ಕುಡಿದು ಹೇಳಿರ್ಬೇಕು, ಅಮಿತ್‌ ಶಾ ಹಾಗೆ ಹೇಳಿಲ್ಲ : ಈಶ್ವರಪ್ಪ

ಯಡಿಯೂರಪ್ಪ ಸರ್ಕಾರ ನಂಬರ್ 1 ಭ್ರಷ್ಟ ಸರ್ಕಾರ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ, ಯಾರೋ ಕುಡಿದು ಹೇಳಿರಬೇಕು, ನೀವೇ ಕುಡಿದಿದ್ದೀರೋ ಅಥವ ಅವರೇ ಕುಡಿದಿದ್ದಾರೋ ನಂಗೇನ್ ಗೊತ್ತು ಎಂದು ಪ್ರತಕರ್ತರ ಪ್ರಶ್ನೆಗೆ ಸಿಟ್ಟಾದ ಘಟನೆ ನಡೆದಿದೆ
ಬಳಿಕ ತಮ್ಮ ಹೇಳಿಕೆಯಲ್ಲಾದ ಗೊಂದಲವನ್ನ ಮರೆಮಾಚಲು ಬಿಜೆಪಿ, ಮೋದಿ, ಅಮಿತ್ ಶಾ ಬಗ್ಗೆ ಮಾತನಾಡೋರ್ಗೆ ನಾನು ಸದನದಲ್ಲೇ ಹೇಳಿದ್ದೇನೆ, ಯಾರೋ ಕುಡಿದು ಹೇಳಿರಬೇಕು ಎಂದು ನಿಮ್ಮೆಲ್ಲಾ ಪ್ರಶ್ನೆಗೆ ಉತ್ತರ ಕೊಡಲು ಆಗೋದಿಲ್ಲ ಎಂದು ಸುಮ್ಮನಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಓರ್ವ ಮುಗ್ಧ ಬಾಲಕ ಅವರ ಹೇಳಿಕೆಗೆ ನಾನು ಉತ್ತರ ನೀಡಬೇಕಾ ಎಂದಿದ್ದಾರೆ.
ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ರಾಹುಲ್ ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಭಸ್ಮವಾಗಿದೆ. ರಾಹುಲ್ ಗಾಂಧಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಹೋಗಬೇಕು ಅನ್ನೋದು ನನ್ನ ಆಸೆ, ರಾಜ್ಯದಲ್ಲೂ ಕಾಂಗ್ರೆಸ್ ಭಸ್ಮವಾಗಲಿದೆ. ಇಷ್ಟು ದಿನ ಸಿದ್ದರಾಮಯ್ಯ ನಾನು ಗೋ ಮಾಂಸ ತಿನ್ನುತ್ತೇನೆ ಎಂದು ಹುಚ್ಚುಚ್ಚು ಹೇಳಿಕೆ ನೀಡುತ್ತಿದ್ದರು. ಈಗ ಹೇಳಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋ ಹತ್ಯೆ ನಿಷೇಧ ಮಾಡಲ್ಲ, ಯಾರು ಬೇಕಾದ್ರು ಗೋ ಹತ್ಯೆ ಮಾಡೋದಕ್ಕೆ ಅವಕಾಶ ಕೊಡ್ತೇವೆ ಎಂದು ಈಗ ಹೇಳಲಿ ಎಂದು ವ್ಯಂಗ್ಯವಾಡಿ, ಚುನಾವಣೆ ಘೋಷಣೆಯಾಗಿದೆ, ಅವರ ಪ್ರಣಾಳಿಕೆಯಲ್ಲಿ ಅದನ್ನ ಹೇಳಲಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com