BJP ಯವರ ಟ್ರಾನ್ಸ್‌ಫಾರ್ಮರ್‌ ಕೆಟ್ಟು ಹೋಗಿದೆ, ಹೊಸ ಬ್ಯಾಟರಿ ಹಾಕಿಕೊಳ್ಳಲಿ : ಡಿಕೆಶಿ

ಶಿವಮೊಗ್ಗ : ಚುನಾವಣೆಗೆ ಧರ್ಮ ಯುದ್ಧ ಘೋಷಣೆಯಾಗಿದೆ. ನಾವು ನುಡಿದಂತೆ ನಡೆದಿದ್ದೇವೆ. ಚುನಾವಣೆಗೆ ನಾವು ಸಿದ್ಧರಾಗಿದ್ದೇವೆ. ನಮಗೆ ಭಯವಿಲ್ಲ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀತಿ ಸಂಹಿತೆ ಜಾರಿಯಾಗಿದ್ದು ಗೊತ್ತಿರಲಿಲ್ಲ. ಅರ್ಧದಲ್ಲಿ ವಿಷಯ ಗೊತ್ತಾಯ್ತು. ರಾಹುಲ್ ಗಾಂಧಿ ಏಪ್ರಿಲ್ 3 ಅಥವಾ 4 ರಂದು ಬರುವ ಸಾಧ್ಯತೆ ಇದೆ. ಆದ್ದರಿಂದ ಸ್ಥಳ ಪರಿಶೀಲನೆಗೆ ಬಂದಿದ್ದೇನೆ. ಇಡೀ ಕಾಂಗ್ರೆಸ್ ನಲ್ಲಿ ಒಮ್ಮತದ ಮೂಲಕ ರಾಹುಲ್ ಗಾಂಧಿ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.

ಶೀಘ್ರದಲ್ಲೇ ಕಾಂಗ್ರೆಸ್ ಟಿಕೆಟ್ ಫೈನಲ್ ಮಾಡಲಾಗುತ್ತದೆ ಎಂದಿರುವ ಅವರು, ಬಿಜೆಪಿಯವರದ್ದೆ ಕೆಟ್ಟು ಹೋದ ಟ್ರಾನ್ಸ್‌ಫಾರ್ಮರ್‌. ನಮ್ಮ ಟ್ರಾನ್ಸ್‌ಫಾರ್ಮರ್‌ ಚೆನ್ನಾಗಿದೆ. ಅವರು ಬ್ಯಾಟರಿ ಇನ್ನೂಂದು ಹಾಕಿಕೊಂಡು ತಯಾರಾಗಲಿ ಎಂದಿದ್ದಾರೆ.

Leave a Reply

Your email address will not be published.