ರಾಹುಲ್‌ ಗಾಂಧಿ ‘ಪಾಪ ಪಾಂಡು’ ಇದ್ದಂತೆ, ಮೆಚ್ಯುರಿಟಿ ಇಲ್ಲ ಎಂದ ಕಾಂಗ್ರೆಸ್‌ ಮಾಜಿ ನಾಯಕ !

ಮೈಸೂರು : ರಾಹುಲ್‌ ಗಾಂಧಿಯವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರೊಂಥರಾ ಪಾಪ ಪಾಂಡು ಇದ್ದಂತೆ ಎಂದು ಮಾಜಿ ಸಂಸದ ಎಚ್‌. ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಮುಗ್ದ, ಅವರಿಗೆ ಮೆಚ್ಯುರಿಟಿ ಇಲ್ಲ. ನಾವೇನು ಬರೆದುಕೊಡುತ್ತೇವೋ ಅದನ್ನು ಓದುತ್ತಾರೆ. ಸಂಸತ್‌ ಕಲಾಪದ ವೇಳೆ ಮೊಬೈಲ್‌ನಲ್ಲಿ ಗೇಮ್ ಆಡುತ್ತಾ ಕುಳಿತಿರುತ್ತಾರೆ ಎಂದು ದೂರಿದ್ದಾರೆ.

ಕಾಂಗ್ರೆಸ್‌ನಿಂದ ರಾಹುಲ್‌ ಗಾಂಧಿಯವರನ್ನು ಪ್ರಧಾನಿ ಮಾಡಬೇಕು ಎನ್ನುತ್ತಿದ್ದಾರೆ. ಆದರೆ ರಾಹುಲ್‌ಗೆ ಆ ಅರ್ಹತೆ ಇಲ್ಲ. ಎನ್‌ಸಿಸಿ, ಎನ್‌ಎಸ್‌ಎಸ್‌ ಬಗ್ಗೆ ರಾಹುಲ್‌ ಗೆ ಸಾಮಾನ್ಯ ತಿಳುವಳಿಕೆಯೇ ಇಲ್ಲ. ಇಂಥಹವರು ಪ್ರಧಾನಿಯಾದರೆ ಇವರನ್ನು ಒಪ್ಪುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com