ನಾವು ಕಾಂಗ್ರೆಸ್‌, BJP ಗಿಂತ ಹತ್ತು ಹೆಜ್ಜೆ ಮುಂದಿದ್ದೇವೆ, ಗೆಲುವು ನಮ್ಮದೇ : HDK

ಮೈಸೂರು : ಒಂದೆಡೆ ಕಾಂಗ್ರೆಸ್ ಕರೆದರೆ ಮೈತ್ರಿ ಮಾಡಿಕೊಳ್ಳುವುದಾಗಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಹೇಳಿಕೆ ನೀಡಿದ್ದರೆ, ಮತ್ತೊಂದೆಡೆ ಬಿಜೆಪಿಯಾಗಲಿ, ಕಾಂಗ್ರೆಸ್‌ ಆಗಲಿ ಯಾರೊಂದಿಗೂ ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಮಗೆ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಸಮಾನ ಎದುರಾಳಿಗಳು. ಕಾಂಗ್ರೆಸನ್ನು ಮುಗಿಸೋಕೆ ರಾಜ್ಯದ ಜನತೆ ಈಗಾಗಲೇ ತೀರ್ಮಾನ‌ ಮಾಡಿದ್ದಾರೆ. ಬಿಜೆಪಿಯನ್ನ‌ಅಧಿಕಾರಕ್ಕೆ ಬರದಂತೆ ಮಾಡಲು ನಮಗೂ ಗೊತ್ತು ಎಂದಿದ್ದಾರೆ. ಅಲ್ಲದೆ, ಜೆಡಿಎಸ್ ಕಂಡರೆ ಸಿದ್ದರಾಮಯ್ಯರಿಗೆ ಭಯ ಶುರುವಾಗಿದೆ.ಅದಕ್ಕಾಗಿ ಜೆಡಿಎಸ್‌ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ. ಸಿ ಫೋರ್ ಸಮೀಕ್ಷೆ ಮಾಡಿದವರು ಸಿಎಂ ಕಾಂಪೌಂಡ್ ನಲ್ಲೆ ಇರುವವರು ಎಂದಿದ್ದಾರೆ.

ಚುನಾವಣೆ ಘೋಷಣೆ ಸಂದರ್ಭದಲ್ಲಿ ಸಿಎಂ ಮಾತು ಕೇಳಿದ್ರೆ ಅಧಿಕಾರಿಗಳೇ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್‌ಡಿಕೆ ಎಚ್ಚರಿಕೆ ನೀಡಿದ್ದು, ರಾತ್ರೋರಾತ್ರಿ ಕಡತಗಳಿಗೆ ಸಿಎಂ ಯಾಕೆ ಸಹಿ ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಂಜನಗೂಡು ನಂಜುಡೇಶ್ವರ ಆಶೀರ್ವಾದ ನನ್ನ ಮೇಲೆ ಇದೆ.ಕಾಂಗ್ರೆಸ್ ಬಿಜೆಪಿಗಿಂತ ಹತ್ತು ಹೆಜ್ಜೆ ಮುಂದೆ ಇದ್ದೇನೆ. ಬಾಕಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಒಂದು ವಾರದಲ್ಲಿ ಬಿಡುಗಡೆ ಮಾಡುತ್ತೇನೆ. ಚುನಾವಣೆಯಲ್ಲಿ ಜನರ ನಾಡಿ‌ಮಿಡಿತ ಅರಿತಿದ್ದೇನೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದಿದ್ದಾರೆ.

Leave a Reply

Your email address will not be published.