ಕೊಪ್ಪಳ : ಲೇಡಿಸ್ ಹಾಸ್ಟೆಲ್‍ಗೆ ಪುಂಡರ ಕಾಟ : ಭಯಭೀತ ಹುಡುಗಿಯರಿಂದ ಪೋಲೀಸರಿಗೆ ದೂರು

ಕೊಪ್ಪಳ : ಬಿಸಿಎಂ ಬಾಲಕೀಯರ ಕಾಲೇಜು ಹಾಸ್ಟೇಲ್ ಗೆ ಪುಂಡರ ಹಾವಳಿ ಹೆಚ್ಚಾಗಿದ್ದು ಹುಡುಗಿಯರು ಭಯಭೀತರಾಗಿ ರಾತ್ರೀ ಇಡೀ ಜಾಗರಣೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿಯ ಹಿರೇಜಂತಗಲ್ಲ ನಲ್ಲಿರುವ ಹುಡುಗಿಯರ ಕಾಲೇಜು ಹಾಸ್ಟೆಲ್ ಗೆ ಪದೇ ಪದೇ ಕಿಡಿಗೇಡಿಗಳು ಕಲ್ಲು ಎಸೆದು, ಕದ ತಟ್ಟಿ ಕಾಟ ಕೊಡುತ್ತಿದ್ದಾರೆ.

ಮಧ್ಯ ರಾತ್ರಿ ಹಾಸ್ಟೆಲ್ ನುಗ್ಗಿ ಈ ರೀತಿ ಕಾಟ ಕೊಡುತ್ತಿದ್ದಾರೆ.ಈ ಹಿಂದೆ ಕಿಡಿಗೇಡಿ ಗಳು ಇದೇ ರೀತಿ ಕಾಟ ಕೊಡುತ್ತಿದ್ದರಿಂದ ಎಸ್ ಎಫ್ ಐ ಕಾರ್ಯಕರ್ತರು ವಿದ್ಯಾರ್ಥಿನಿರಯರ ಸಹಾಯಕ್ಕೆ ಬಂದು ರಾತ್ರಿ ಇಡೀ ಕಾವಲು ಕಾದಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಹಾಸ್ಟೆಲ್ ಗೆ ಓರ್ವ ವಾಚ್ ಮ್ಯಾನ್ ಇದ್ರು, ಹಾಸ್ಟೆಲ್ ಮೂರು ಕೊಠಡಿಗಳಲ್ಲಿ ನಡೆಯುತ್ತಿರುವುದರಿಂದ ಎಲ್ಲಾ ಕಡೆ ಗಮನಿಸುವುದು ಕಷ್ಟಸಾಧ್ಯವಾಗಿದೆ. ಹುಡುಗಿಯರಿಗೆ ಸೂಕ್ತ ರಕ್ಷಣೆ ನೀಡುವಂತೆ ನೂರಾರು ವಿದ್ಯಾರ್ಥಿಗಳು ಗಂಗಾವತಿ ನಗರ ಪೊಲೀಸ್ ಠಾಣೆಗೆ ತೆರಳಿ ಮನವಿ ಮಾಡಿದ್ದಾರೆ.

Leave a Reply

Your email address will not be published.