ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು : ಸಿ-ಫೋರ್‌ ಸಮೀಕ್ಷೆ ಹೇಳಿದೆ ಇಂಟ್ರೆಸ್ಟಿಂಗ್‌ ವಿಷಯ !

ಬೆಂಗಳೂರು : ಕರ್ನಾಟದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ. ಅಷ್ಟೇ ಅಲ್ಲದೆ 2013ರಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಿ-ಫೋರ್‌ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

 

2018ರ ಮಾರ್ಚ್‌ 1ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ ಎಂದಿದೆ.

 
2013ರಲ್ಲಿ ಸಮೀಕ್ಷೆ ಬಿಡುಗಡೆ ಮಾಡಿದ್ದ ಸಿ-ಫೋರ್ ಸಂಸ್ಥೆ ಕಾಂಗ್ರೆಸ್‌ 119ರಿಂದ 120 ಸ್ಥಾನ ಗೆಲ್ಲಬಹುದು ಎಂದಿತ್ತು. ಈಗ ಕಾಂಗ್ರೆಸ್‌ ಮತಗಳಿಕೆಯನ್ನು ಹೆಚ್ಚಿಸಿಕೊಂಡು ಶೇ. 46 ಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

 

Leave a Reply

Your email address will not be published.