ಅಗತ್ಯ ಬಿದ್ದರೆ ನಾನೂ ಚುನಾವಣಾ ಕಣಕ್ಕಿಳಿಯುತ್ತೇನೆ ಅಂದ್ರು ಯಶ್‌ !

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ. ಈಗಾಗಲೆ ಪಕ್ಷಗಳು ಸ್ಟಾರ್‌ ಪ್ರಚಾರಕರನ್ನು ಕರೆತಂದು ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಿಸಲು ತಯಾರಿ ನಡೆಸಿದ್ದಾರೆ. ಈ ಮಧ್ಯೆ ರಾಕಿಂಗ್‌ ಸ್ಟಾರ್‌ ಯಶ್‌ ಏನ್‌ ಸುದ್ದಿ ಜೊತೆ ಮಾತನಾಡಿದ್ದು, ಅಗತ್ಯ ಬಿದ್ದರೆ ತಾವೂ ಚುನಾವಣಾ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.

ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡಬೇಕು ಬದ್ದತೆಯಿರುವ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಅಧಿಕಾರಕ್ಕೆ ಬಂದ ಮೇಲೆ ಸರಿಯಿಲ್ಲ ಎನಿಸಿದರೆ ಆಮೇಲೆ ಪ್ರಶ್ನೆ ಮಾಡುತ್ತೇನೆ. ಸಭ್ಯರು, ಕೆಲಸ ಮಾಡುವವರು ಗೆಲ್ಲಬೇಕು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ. ಕೆಲ ರಾಜಕಾರಣಿಗಳು ನನ್ನ ಬಳಿ ಬಂದು ನಮ್ಮ ಪಕ್ಷಕ್ಕೆ ಬನ್ನಿ ಎಂದಿದ್ದಾರೆ. ಪಕ್ಷಕ್ಕೆ ಬರದಿದ್ದರೂ ಪ್ರಚಾರಕ್ಕಾದರೂ ಬನ್ನಿ ಎಂದಿದ್ದಾರೆ. ಆದರೆ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ನಾನು ಪ್ರಚಾರ ಮಾಡುವುದು ದೊಡ್ಡ ವಿಷಯವಲ್ಲ. ಆದರೆ ಅವರು ಸರಿಯಾಗಿ ಕೆಲಸ ಮಾಡಬೇಕು ಎಂದಿದ್ದಾರೆ.

ರಾಜಕೀಯ ಎಂದರೆ ನನ್ನದೇ ಆದ ಪರಿಕಲ್ಪನೆಗಳಿವೆ. ಆ ಮಾರ್ಗದಲ್ಲೇ ನಾನು ನಡೆಯುತ್ತೇನೆ. ರಾಜಕೀಯ ನನಗೆ ಇಷ್ಟವಾಗದ ಕ್ಷೇತ್ರವೇನೂ ಅಲ್ಲ. ಬರುವ ಸಂದರ್ಭ ಬಂದರೆ ನಾನು ಖಂಡಿತ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com