ಬೆಂಗಳೂರಿನ 27 ಕ್ಷೇತ್ರಗಳಲ್ಲಿ ಯಾರು ಗೆಲ್ತಾರೆ : CM ನಡೆಸಿದ ಗುಪ್ತ ಸಮೀಕ್ಷಾ ವರದಿ ಬಹಿರಂಗ

ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಖಾಡ ರಂಗೇರುತ್ತಿದೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುರಿತು ಗುಪ್ತ ಸರ್ವೇ ಮಾಡಿಸಿದ್ದು, ಈ ಸಮೀಕ್ಷೆಯ ವರದಿ ಏನ್‌ ಸುದ್ದಿಗೆ ಲಭ್ಯವಾಗಿದೆ.

ಚಿಕ್ಕಪೇಟೆ: ಚಿಕ್ಕಪೇಟೆ ಕ್ಷೇತ್ರದಲ್ಲಿ ಹಾಲಿ ಶಾಸಕ ಆರ್ ವಿ ದೇವರಾಜ್‌ಗೆ ಗೆಲವು ನಿಶ್ಚಿತ. ಆದ್ರೆ ದೇವರಾಜ್ ಪುತ್ರ ಯುವರಾಜ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ್ರೆ ಸೋಲನುಭವಿಸುತ್ತಾರೆ. ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಡಾ. ಹೇಮಚಂದ್ರ ಸಾಗರ್ ಕಣಕ್ಕಿಳಿದ್ರೆ ಯುವರಾಜ್‌ಗೆ ಸೋಲಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಬಿಟಿಎಂ ಲೇಔಟ್- ರಾಮಲಿಂಗಾರೆಡ್ಡಿ ಗೆಲವು ಫಿಫ್ಟಿ-ಫಿಫ್ಟಿ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿ ಲಲ್ಲೇಶ್ ರೆಡ್ಡಿಗೆ ಟಿಕೆಟ್ ಕೊಟ್ಟರೆ ರಾಮಲಿಂಗಾರೆಡ್ಡಿ ಸೋಲುವ ಸಾಧ್ಯತೆ.

ಆರ್ ಆರ್ ನಗರ- ಮುನಿರತ್ನಂ ಜೆಡಿಎಸ್‌ಗೆ ಹೋಗದೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ರೆ ಸೋಲು ಖಚಿತ. ಪ್ರಜ್ಚಲ್ ರೇವಣ್ಣ ಜೆಡಿಎಸ್ ನಿಂದ ನಿಂತರೆ ಗೆಲವು. ಉಳಿದಂತೆ ರಾಮಚಂದ್ರ, ಶಿಲ್ಪಾ ಗಣೇಶ್, ಮುನಿರಾಜು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು.

ಶಿವಾಜಿನಗರ – ರೋಷನ್ ಬೇಗ್ ವಿರುದ್ಧ ಬಿಜೆಪಿಯಿಂದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿಂತರೆ ಬೇಗ್ ಅವರ ಸೋಲು ಖಚಿತ.

ಸರ್ವಜ್ಞನಗರ – ಕೆ ಜೆ ಜಾರ್ಜ್ ಗೆಲವು ಖಚಿತ. ಬಿಜೆಪಿ ಹಾಗೂ ಜೆಡಿಎಸ್‌ನಿಂದ ಯಾರೇ ಅಭ್ಯರ್ಥಿಗಳಿದ್ರು ಗೆಲ್ಲುವುದು ಜಾರ್ಜ್.

ಯಶವಂತಪುರ- ಎಸ್ ಟಿ ಸೋಮಶೇಖರ್ ವಿರುದ್ಧ ಜೆಡಿಎಸ್ ಜವರೇಗೌಡ ಅನುಕಂಪ ಹೆಚ್ಚು, ಗೆಲುವಿನ ಸಾಧ್ಯತೆ. ಎರಡು ಬಾರಿ ಸೋತಿರುವ ಅನುಕಂಪ ಜವರೇಗೌಡ ಕೈಹಿಡಿಯುವ ಸಾಧ್ಯತೆ.

ಕೆ ಆರ್ ಪುರಂ -ಭೈರತಿ ಬಸವರಾಜ್ ವಿರುದ್ಧ ಗಣಿಧಣಿ ಜನಾರ್ಧನ ರೆಡ್ಡಿ ಪತ್ನಿ ಸ್ಪರ್ಧೆಗೆ ಅವಕಾಶ ಸಿಕ್ಕಿರೆ ಭೈರತಿಗೆ ಟಫ್. ಅರುಣಾಲಕ್ಷ್ಮೀ ಜನಾರ್ಧನ್ ರೆಡ್ಡಿ ಸ್ಪರ್ಧಿಸಿದ್ರೆ ಗೆಲವು.

ಬ್ಯಾಟರಾಯನಪುರ – ಕೃಷ್ಣ ಭೈರೇಗೌಡರ ಸೋಲು ಖಚಿತ. ಬಿಜೆಪಿಯ ಆರ್ ಅಶೋಕ್ ಸಹೋದರ ಆರ್. ರವಿ ಹಾಗೂ ಜೆಡಿಎಸ್ ತಿಂಡ್ಲು ಚಂದ್ರಣ್ಣ ನೇರ ಹಣಾಹಣಿ.

ಶಾಂತಿನಗರ – ಹ್ಯಾರಿಸ್ ಸೋಲು ಖಚಿತ. ಬಿಜೆಪಿಯ ಅಭ್ಯರ್ಥಿಗೆ ಗೆಲವು ಖಚಿತ, ಬಿಜೆಪಿಯ ಶ್ರೀಧರ್ ರೆಡ್ಡಿ, ವಾಸುದೇವ ಮೂರ್ತಿ ಆಕಾಂಕ್ಷಿಗಳು.

ಗಾಂಧಿನಗರ – ದಿನೇಶ್ ಗುಂಡೂರಾವ್ ಹಾಗೂ ಜೆಡಿಎಸ್‌ನ ನಾರಾಯಣಸ್ವಾಮಿ ಸೆಣಸಾಟ. ಗುಂಡೂರಾವ್ ಗೆಲವು ಸಾಧ್ಯ.

ಗೋವಿಂದರಾಜನಗರ – ಪ್ರಿಯಾ ಕೃಷ್ಣ ಸೋಲು ಖಚಿತ. ಬಿಜೆಪಿ ಕಡೆ ಜನರ ಒಲವು. ಬಿಜೆಪಿಯ ವಿ ಸೋಮಣ್ಣ ಅಥವಾ ಉಮೇಶ್ ಶೆಟ್ಟಿ ಬಿಜೆಪಿಯಿಂದ ಸ್ಪರ್ಧೆಮಾಡಿದ್ರೆ ಗೆಲವು. ಮಾಜಿ ಮೇಯರ್ ಶಾಂತಕುಮಾರಿ ಕೂಡ ಬಿಜೆಪಿ ಆಕಾಂಕ್ಷಿ. ಶಾಂತಕುಮಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ರೆ ಪ್ರಿಯಾ ಕೃಷ್ಣ ಕಷ್ಟದ ಗೆಲವು ಸಾಧ್ಯತೆ.

ವಿಜನಯಗರ – ಕಾಂಗ್ರೆಸ್ ಶಾಸಕ ಎಂ ಕೃಷ್ಣಪ್ಪ ವಿರುದ್ಧ ಬಿಜೆಪಿಯ ಮಾಜಿ ಸಚಿವ ವಿ. ಸೋಮಣ್ಣ ಸ್ಪರ್ಧೆ ಮಾಡಿದ್ರೆ ಬಿಜೆಪಿ ಗೆಲವು ಸಾಧ್ಯ.

ಸಿ ವಿ ರಾಮನ್ ನಗರ – ಬಿಜೆಪಿ ಶಾಸಕ ರಘು ಗೆಲ್ಲುವ ಸಾಧ್ಯತೆ. ಸಚಿವ ಮಹಾದೇವಪ್ಪಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಪಿ ರಮೇಶ್ ಬಂಡಾಯ ಮಾಡ್ತಾರೆ. ಹಾಗಾಗಿ ಬಿಜೆಪಿಯ ರಘು ಅವ್ರಿಗೆ ಸುಲಭ ಜಯ ಸಾಧ್ಯತೆ. ಈಗಾಗಲೇ ಕಾಂಗ್ರೆಸ್ನಲ್ಲಿಯ ಗೊಂದಲ ಬಿಜೆಪಿಯ ರಘುಗೆ ಸಹಾಯಕಾರಿ.

ಜಯನಗರ-ಬಿಜೆಪಿ ಶಾಸಕ ವಿಜಯಕುಮಾರ್ ಗೆಲವು ಸಾಧ್ಯ. ಕಾಂಗ್ರೆಸ್ ನಿಂದ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಟಿಕೆಟ್ ಕೊಟ್ಟರೆ ತುರುಸಿನ ಸ್ಪರ್ಧೆ. ಕಾಂಗ್ರೆಸ್ ಮತ್ತೊಬ್ಬ ಆಕಾಂಕ್ಷಿ ವೇಣುಗೋಪಾಲ.

ಬೆಂಗಳೂರು ದಕ್ಷಿಣ-ಬಿಜೆಪಿಯಿಂದ ಎಂ ಕೃಷ್ಣಪ್ಪ, ಕಾಂಗ್ರೆಸ್ ನಿಂದ ಆರ್ ಕೆ ರಮೇಶ್, ಸುಷ್ಮಾ ರಾಜಗೋಪಾಲ್ ರೆಡ್ಡಿ ಸ್ಪರ್ಧೆ ಆಕಾಂಕ್ಷಿಗಳು. ಬಿಜೆಪಿಗೆ ಗೆಲುವಿನ ಅವಕಾಶ ಹೆಚ್ಚು.

ಯಲಹಂಕ- ಬಿಜೆಪಿಯ ಎಸ್ ಆರ್ ವಿಶ್ವನಾಥ್, ಕಾಂಗ್ರೆಸ್ ನಿಂದ ಗೋಪಾಲಕೃಷ್ಣ, ಕೇಶವ ರಾಜಣ್ಣ, ಜೆಡಿಎಸ್ ನಿಂದ ಎಂ ಕೃಷ್ಣಪ್ಪ (ನಿವೃತ್ತ ಪೊಲೀಸ್ ಅಧಿಕಾರಿ) ಆಕಾಂಕ್ಷಿಗಳು. ವಿಶ್ವನಾಥ್ ಗೆಲವು ಸಾಧ್ಯತೆ

ಮಲ್ಲೇಶ್ವರಂ-ಬಿಜೆಪಿಯ ಡಾ. ಅಶ್ವತ್ಥನಾರಾಯಣ, ಪ್ರಕಾಶ್ ಐಯ್ಯಂಗಾರ್, ಕಾಂಗ್ರೆಸ್ ನಿಂದ ಬಿ ಕೆ ಶಿವರಾಂ, ಸಚಿವ ಎಂ ಆರ್ ಸೀತಾರಾಂ ಆಕಾಂಕ್ಷಿಗಳು. ಬಿಜೆಪಿ ಅಭ್ಯರ್ಥಿಗೆ ಗೆಲವು

ರಾಜಾಜಿನಗರ-ಎಸ್ ಸುರೇಶಕುಮಾರ್, ಕಾಂಗ್ರೆಸ್ ನಿಂದ ಮಂಜುಳಾ ನಾಯ್ಡು, ಮಾಜಿ ಮೇಯರ್ ಪದ್ಮಾವತಿ ಆಕಾಂಕ್ಷಿಗಳು. ಸುರೇಶಕುಮಾರ್ ಗೆಲ್ತಾರೆ ಎಂಬ ವರದಿ ಇದೆ.

ದಾಸರಹಳ್ಳಿ – ಬಿಜೆಪಿ ಮುನಿರಾಜು, ಕೆಡಿಎಸ್ ನಿಂದ ಹನುಮಂತರಾಯಪ್ಪ, ಕಾಂಗ್ರೆಸ್ ನಿಂದ ಬಿ ಎಲ್ ಶಂಕರ್, ಜಯಂತಿ ಭಾಗವತ ಆಕಾಂಕ್ಷಿಗಳು. ಹನುಮಂತರಾಯಪ್ಪಗೆ ಹೆಚ್ಚಿನ ಬಲವಿದೆ.

ಬಸವನಗುಡಿ-ರವಿ ಸುಬ್ರಮಣ್ಯ, ಕಾಂಗ್ರೆಸ್ ನಿಂದ ಚಂದ್ರಶೇಖರ್, ಜೆಡಿಎಸ್ ನಿಂದ ಬಾಗೇಗೌಡ ಆಕಾಂಕ್ಷಿಗಳು. ರವಿ ಸುಬ್ರಮಣ್ಯಗೆ ಗೆಲವು ಸಾಧ್ಯತೆ

ಪದ್ಮನಾಭನಗರ – ಬಿಜೆಪಿಯ ಆರ್ ಅಶೋಕ್, ಕಾಂಗ್ರೆಸ್ ನಿಂದ ಗುರಪ್ಪನಾಯ್ಡು, ಚೇತನಗೌಡ, ಮಾಜಿ ಮೇಯರ್ ವೆಂಕಟೇಶಮೂರ್ತಿ, ಜೆಡಿಎಸ್ ನಿಂದ ಬಿ ಗೋಪಾಲ್ ಪ್ರಸಾದ್, ಸಂತೋಷ್ ಆಕಾಂಕ್ಷಿಗಳು. ಆರ್. ಅಶೋಕ್ ಗೆ ಗೆಲವು.

ಬೊಮ್ಮನಹಳ್ಳಿ- ಬಿಜೆಪಿಯ ಸತೀಶ್ ರೆಡ್ಡಿ, ಕಾಂಗ್ರೆಸ್‌ನಿಂದ ನಾಗಭೂಷಣ್ ರೆಡ್ಡಿ, ಜೆಡಿಎಸ್ ನಿಂದ ಶರಶ್ಚಂದ್ರ ಆಕಾಂಕ್ಷಿಗಳು. ಸತೀಶ್ ರೆಡ್ಡಿ ಗೆಲವು ಸಾಧ್ಯತೆ

ಮಹಾದೇವಪುರ – ಬಿಜೆಪಿಯ ಅರವಿಂದ ಲಿಂಬಾವಳಿ, ಕಾಂಗ್ರೆಸ್ ನಿಂದ ಎ ಸಿ ಶ್ರೀನಿವಾಸ, ಜೆಡಿಎಸ್ ನಿಂದ ಗೋವರ್ಧನ್ ಆಕಾಂಕ್ಷಿಗಳು . ಲಿಂಬಾವಳಿ ಗೆಲವು ಸಾಧ್ಯತೆ

ಹೆಬ್ಬಾಳ – ಬಿಜೆಪಿಯ ನಾರಾಯಣಸ್ವಾಮಿ, ಕಾಂಗ್ರೆಸ್ ನಿಂದ ಭೈರತಿ ಸುರೇಶ್, ಸಿ.ಕೆ ಅಬ್ದುಲ್ ರೆಹಮಾನ್, ಜೆಡಿಎಸ್‌ನಿಂದ ಹನುಂತೇಗೌಡ, ಮಾಜಿ ಮೇಯರ್ ಆನಂದ್ ಆಕಾಂಕ್ಷಿಗಳು. ಭೈರತಿ ಸುರೇಶ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ರೆ ಗೆಲವು ಸಾಧ್ಯತೆ

ಮಹಾಲಕ್ಷ್ಮೀಲೇಔಟ್ – ಜೆಡಿಎಸ್ ಶಾಸಕ ಗೋಪಾಲಯ್ಯ, ಬಿಜೆಪಿಯಿಂದ ನೆ ಲ ನರೇಂದ್ರಬಾಬು, ಎಸ್ ಹರೀಶ್ ಕಾಂಗ್ರೆಸ್ ನಿಂದ ಗಿರೀಶ್ ಆಕಾಂಕ್ಷಿಗಳು. ಜೆಡಿಎಸ್ ಗೋಪಾಲಯ್ಯ ಗೆಲವು ಸಾಧ್ಯತೆ

ಚಾಮರಾಜಪೇಟೆ – ಕಾಂಗ್ರೆಸ್ ನಿಂದ ಜಮೀರ್ ಅಹ್ಮದ್ ಅಭ್ಯರ್ಥಿ ಆದ್ರೆ ಜೆಡಿಎಸ್ ನಿಂದ ಇಬ್ರಾಹಿಂ ಪಾಷಾ ನಿಲ್ತಾರೆ. ಹಾಗಾದ್ರೆ ಬಿಜೆಪಿಯ ಲಹರಿ ವೇಲು ಗೆಲವು ಸಾಧ್ಯತೆ

ಪುಲಕೇಶಿನಗರ – ಕಾಂಗ್ರೆಸ್ ನಿಂದ ಅಖಂಡ ಶ್ರೀನಿವಾಸ್ ಸ್ಪರ್ಧಿಸಿದ್ರೆ, ಜೆಡಿಎಸ್ ನಿಂದ ಮಾರಿಮುತ್ತು ಸ್ಪರ್ಧೆ. ಅಖಂಡ ಗೆಲವು ಸಾಧ್ಯತೆ.

Leave a Reply

Your email address will not be published.

Social Media Auto Publish Powered By : XYZScripts.com