IPL ಉದ್ಘಾಟನೆಲಿ ಡಾನ್ಸ್‌ ಮಾಡಲು ರಣವೀರ್‌ ಪಡೀತಿರೋ ಸಂಭಾವನೆ ಕೇಳಿದ್ರೆ ಶಾಕ್‌ ಗ್ಯಾರೆಂಟಿ!

ಐಪಿಎಲ್‌ ಕ್ರಿಕೆಟ್‌ ಹವಾ ಬಿಸಿಯೇರುತ್ತಿದೆ. 11ನೇ ಆವೃತ್ತಿಯ ಐಪಿಎಲ್‌ ಉದ್ಘಾಟನೆ ಏಪ್ರಿಲ್‌ 7ರಂದು ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಸಂಪ್ರದಾಯದಂತೆ ಉದ್ಘಾಟನೆಯ ಸಮಾರಂಭಕ್ಕೆ ಬಾಲಿವುಡ್‌ ಸ್ಟಾರ್‌ಗಳ ದಂಡೇ ಹರಿದು ಬರಲಿದೆ.

ಈ ಬಾರಿಯ ಉದ್ಘಾಟನೆ ಸಮಾರಂಭಕ್ಕೆ ರಣವೀರ್‌ ಸಿಂಗ್‌, ವರುಣ್ ಧವನ್‌, ಪರಿಣಿತಿ ಛೋಪ್ರಾ, ಜಾಕ್ವೆಲಿನ್‌ ಫರ್ನಾಂಡಿಸ್‌ ಮುಖ್ಯ ಆಕರ್ಷಣೆಯಾಗಿದ್ದು, ಈ ಬಾರಿ ರಣವೀರ್ ಸಿಂಗ್‌ಗೆ ಭಾರೀ ಬೇಡಿಕೆ ಇದೆಯಂತೆ.

ಮೂಲಗಳ ಪ್ರಕಾರ ರಣವೀರ್‌ ಸಿಂಗ್ ಐಪಿಎಲ್‌ ಉದ್ಘಾಟನೆಯ ವೇದಿಕೆಯಲ್ಲಿ ನೃತ್ಯ ಮಾಡಲು ಬರೋಬ್ಬರಿ 5 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಕೇವಲ 15 ನಿಮಿಷಗಳ ನೃತ್ಯಕ್ಕೆ ಇಷ್ಟೊಂದು ಹಣ ಪಡೆಯುತ್ತಿರುವುದು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ. 15 ನಿಮಿಷಕ್ಕೆ 5 ಕೋಟಿ ಎಂದರೆ 1 ನಿಮಿಷಕ್ಕೆ 33 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ.

ಈ ಬಾರಿಯ ಐಪಿಎಲ್‌ ಉದ್ಘಾಟನೆಗೆ 20ರಿಂದ 30 ಕೋಟಿ ಖರ್ಚು ಮಾಡಲಾಗುತ್ತಿದ್ದು, ಧೋನಿ ಹಾಗೂ ರೋಹಿತ್‌ ಶರ್ಮಾ ಮಾತ್ರ ಉದ್ಘಾಟನೆಗೆ ಬರುತ್ತಿದ್ದು, ಇನ್ನುಳಿದ ಸ್ಟಾರ್‌ಗಳು ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಎನ್ನಲಾಗಿದೆ.

ಪದ್ಮಾವತ್‌ ಸಿನಿಮಾದ ಬಳಿಕ , ಜೊತೆಗೆ ದೀಪಿಕಾ ಜೊತೆ ಮದುವೆ ಫಿಕ್ಸ್‌ ಆದ ಬಳಿಕ ರಣವೀರ್‌ ದುಬಾರಿಯಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com