ಹಾಸನ DC ರೋಹಿಣಿ ಸಿಂಧೂರಿಗೆ ರಿಲೀಫ್‌ : ಮರು ವಿಚಾರಣೆಗೆ ಸೂಚನೆ ನೀಡಿದ ಹೈಕೋರ್ಟ್‌

ಬೆಂಗಳೂರು : ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ಪ್ರಕರಣ ವಿವಾದ ಸಂಬಂಧ ಮರು ವಿಚಾರಣೆ ನಡೆಸುವಂತೆ ಸಿಎಟಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಏಪ್ರಿಲ್ 2 ರಂದು ಸಿಎಟಿ ಮುಂದೆ ವಾದ ಮಂಡಿಸಲು ಸೂಚನೆ ನೀಡಲಾಗಿದ್ದು, ಅಲ್ಲಿಯವರೆಗೆ ಡಿಸಿ ಹುದ್ದೆಯಲ್ಲಿ ರೋಹಿಣಿ ಸಿಂಧೂರಿ ಮುಂದುವರಿಯಲಿದ್ದಾರೆ.

ಸಿಎಟಿಯ ಹಿಂದಿನ ಆದೇಶವನ್ನು ಹೈಕೋರ್ಟ್‌  ರದ್ದುಪಡಿಸಿದ್ದು, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಮುಂದುವರಿಯಲಿದೆ. ಸಿಎಟಿ ನಡೆಯ ಮೇಲೆ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯ ವಿಚಾರ ನಿರ್ಧಾರವಾಗಲಿದೆ.

Leave a Reply

Your email address will not be published.