Shocking : ಯಡಿಯೂರಪ್ಪ ದೇಶದ ನಂಬರ್‌ 1 ಭ್ರಷ್ಟ ಮುಖ್ಯಮಂತ್ರಿ : ಅಮಿತ್ ಶಾ !

ಬೆಂಗಳೂರು : ಮಾತಿನಾಡುವ ಭರದಲ್ಲಿ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಯಡವಟ್ಟು ಮಾಡಿಕೊಂಡಿದ್ದಾರೆ. ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಸಿದ್ದರಾಮಯ್ಯ ಸರ್ಕಾರ ನಂಬರ್‌ 1 ಭ್ರಷ್ಟ ಸರ್ಕಾರ ಎನ್ನುವ ಬದಲು ಯಡಿಯೂರಪ್ಪ ಸರ್ಕಾರ ನಂಬರ್‌ 1 ಭ್ರಷ್ಟ ಸರ್ಕಾರ ಎಂದಿದ್ದಾರೆ.

ಭ್ರಷ್ಟಾಚಾರದಲ್ಲಿ ಯಡಿಯೂರಪ್ಪನವರ ಸರ್ಕಾರವೇ ನಂಬರ್‌ 1 ಸರ್ಕಾರ. ಭ್ರಷ್ಟಾಚಾರ ವಿಚಾರಕ್ಕೆ ಬಂದಾಗ ಮೊದಲ ಸ್ಥಾನದಲ್ಲಿರುವುದು ಯಡಿಯೂರಪ್ಪ ಸರ್ಕಾರ ಎಂದಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ಯಡಿಯೂರಪ್ಪ ಅಮಿತ್ ಶಾ ಅವರನ್ನು ಎಚ್ಚರಿಸಿದ್ದು, ಕೂಡಲೆ ಅಮಿತ್ ಶಾ, ಭ್ರಷ್ಟಾಚಾರದ ಸರ್ಕಾರಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಸಿದ್ದರಾಮಯ್ಯ ಸರ್ಕಾರ ಎಂದು ಸರಿಪಡಿಸಿಕೊಂಡು ಹೇಳಿದ್ದಾರೆ.

ಈ ಕುರಿತು ಕಾಂಗ್ರೆಸ್‌ ಮುಖಂಡರು ಪ್ರತಿಕ್ರಿಯಿಸಿದ್ದು, ಅಮಿತ್ ಶಾ ಸರಿಯಾಗೇ ಹೇಳಿದ್ದಾರೆ. ನಿಮ್ಮ ಮಾತಿನ ಬಗ್ಗೆ ನಮಗೆ ಸಹಮತವಿದೆ. ಬಿಜೆಪಿಯೇ ಭ್ರಷ್ಟ ಸರ್ಕಾರ ಎಂದು ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಾರೆ.

ಜೊತೆಗೆ ಯಡಿಯೂರಪ್ಪ ಅವರ ವಿಚಾರದಲ್ಲಿ ಅಮಿತ್ ಶಾ ಯಡವಟ್ಟು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸಹ ಅನೇಕ ಬಾರಿ ಅಮಿತ್‌ ಶಾ ಯಡಿಯೂರಪ್ಪನವರ ಕುರಿತು ತಪ್ಪಾಗಿ ಮಾತನಾಡಿದ್ದರು ಎಂದು ಹಳೆಯ ವಿಡಿಯೋವೊಂದನ್ನು ಹಾಕಿದ್ದಾರೆ.

ಅಲ್ಲದೆ ಈ ಕುರಿತು ಸಿಎಂ ಸಿದ್ದರಾಮಯ್ಯ ಸಹ ಟ್ವೀಟ್‌ ಮಾಡಿದ್ದು, ಸುಳ್ಳುಗಳ ಸರದಾರ ಶಾ ಕೊನೆಗೂ ಸತ್ಯ ನುಡಿದಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com