ಚುನಾವಣಾ ಆಯೋಗಕ್ಕೂ ಮುನ್ನ ದಿನಾಂಕ ಪ್ರಕಟಿಸಿ ಯಡವಟ್ಟು ಮಾಡಿಕೊಂಡ BJP ಮುಖಂಡ !

ದೆಹಲಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕ ಪ್ರಕಟಿಸಿದೆ. ಮೇ 12ರಂದು ಚುನಾವಣೆ ನಡೆಯಲಿದ್ದು 15ರಂದು ಮತ ಎಣಿಕೆ ನಡೆಯಲಿದೆ ಎಂಬ ಘೋಷಣೆಯೂ ಆಗಿದೆ.

ಆದರೆ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆಯ ದಿನಾಂಕ ಘೋಷಿಸುವ ಮುನ್ನವೇ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವಿಯ  ತಮ್ಮ ಸಾಮಾಜಿಕ ಜಾಲತಾಣದ ಟ್ವಿಟರ್‌ ಖಾತೆಯಲ್ಲಿ ಮತದಾನದ ದಿನಾಂಕ ಹಾಗೂ ಫಲಿತಾಂಶದ ದಿನಾಂಕ ಪ್ರಕಟಿಸಿರುವುದು ಕುತೂಹಲ ಮೂಡಿಸಿದೆ.

ಮೇ 12ರಂದು ಮತದಾನ ನಡೆಯಲಿದೆ. ಮೇ 18ರಂದು ಫಲಿತಾಂಶ ಪ್ರಕಟವಾಗಿದೆ ಎಂದು ಹೇಳಿದ್ದಾರೆ. ಆದರೆ ಫಲಿತಾಂಶದ ದಿನಾಂಕ ತಪ್ಪಾಗಿದೆ. ಚುನಾವಣಾ ದಿನಾಂಕವನ್ನು ಗೌಪ್ಯವಾಗಿಟ್ಟರೂ ಆಯೋಗ ಘೋಷಣೆ ಮಾಡುವುದಕ್ಕಿಂತ ಮುಂಚೆ ಮಾಳವಿಯಾ ಅವರಿಗೆ ಲಭ್ಯವಾಗಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.

ಈ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದ್ದಾರೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಚುನಾವಣಾ ಆಯುಕ್ತ ರಾವತ್‌ ಹೇಳಿದ್ದಾರೆ.

Leave a Reply

Your email address will not be published.