ಇನ್ನೂ ನಿಂತಿಲ್ಲ ಮಲಹೊರುವ ಅನಿಷ್ಠ ಪದ್ದತಿ : ಬೀದರ್‌ನಲ್ಲೊಂದು ಅಮಾನವೀಯ ಘಟನೆ

ಬೀದರ್ :  ನಗರದಲ್ಲಿ ನಿಷೇಧಿತ ಮಲಹೋರುವ ಪದ್ಧತಿ ಇನ್ನೂ ಜೀವಂತವಾಗಿದೆ. ಸಾರ್ವಜನಿಕ ಶೌಚಾಲಯದ ಟ್ಯಾಂಕ್ ನಿಂದ ರಾತ್ರಿ ವೇಳೆಯಲ್ಲಿ ಕೆಲ ಕಾರ್ಮಿಕರನ್ನು ಮಲ ಹೊರಲು ಸೇಫ್ಟಿ ಟ್ಯಾಂಕ್ ಗೆ ಇಳಿಸಿ ಅಲ್ಲಿಂದ ಟೆಂಪೂದಲ್ಲಿ ಲೋಡ್‌ ಮಾಡಿಸಿದ ಘಟನೆ ತಡರಾತ್ರಿ ನಡೆದಿದೆ.

ನಗರದ ಜಿಲ್ಲಾಸ್ಪತ್ರೆ ಎದುರಿನಲ್ಲಿರುವ ಸಾರ್ವಜನಿಕ ಶೌಚಾಲಯದ ಮುಂದೆ ಶೌಚಾಲಯ ಗುತ್ತಿಗೆದಾರ ಕುರ್ಚಿ ಹಾಕಿಕೊಂಡು ಕುಳಿತು ಕೊಂಡು 6ಮಂದಿ  ಯುವಕರನ್ನು ಬಳಸಿಕೊಂಡು ಟ್ಯಾಂಕ್‌ನಿಂದ ಮಲ ಹೊರಿಸಿದ್ದಾರೆ.  ಮಲ ಹೊರುವವರಿಗೆ ಯಾವುದೇ ಸುರಕ್ಷಿತ ವಿಧಾನವಿಲ್ಲದೆ ಸ್ವಚ್ಛ ಮಾಡಿಸಿದ್ದು, ಈಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com