ಈ ಸೌಂದರ್ಯ ರಹಸ್ಯಗಳನ್ನು ತಿಳಿದುಕೊಳ್ಳಿ….ಸಂಪೂರ್ಣ ಅಂದವನ್ನು ನಿಮ್ಮದಾಗಿಸಿಕೊಳ್ಳಿ….

ಮಹಿಳೆಯರಿಗೆ ಸೌಂದರ್ಯವೇ ಪ್ರಧಾನ. ಮಹಿಳೆಯರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಏನೇನೋ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅಥವಾ ಹೆಂಗಳೆಯರು ರಾಸಾಯನಿಕ ಕ್ರೀಂಗಳ ಮೊರೆ ಹೋಗಿದ್ದು ಇದರಿಂದ ತ್ವಚೆಗೆ ಹಾನಿ ಉಂಟು ಮಾಡುತ್ತದೆ.

ಆದರೆ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಹಿಂದಿನ ಕಾಲದ ಮಹಿಳೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಅವುಗಳಿಂದ ಯಾವುದೇ ಅಡ್ಡ ಪರಿಣಾಮವೂ ಆಗುತ್ತಿರಲಿಲ್ಲ. ಅಂತಹ ಸೌಂದರ್ಯ ರಹಸ್ಯಗಳು ಯಾವುದು ಎಂದು ತಿಳಿದುಕೊಳ್ಳೋಣ.

ಮೆಂತೆ : ಮೆಂತೆ ಬೀಜಗಳಿಂದ ಪೇಸ್ಟ್‌ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ಬಳಿಕ ತೊಳೆಯುವುದರಿಂದ ತ್ವಚೆ ಮೃದುವಾಗುತ್ತದೆ ಹಾಗೂ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆ. ಅಲ್ಲದೆ ಇದು ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರಗಳ ವಿರುದ್ಧ ಕೆಲಸ ಮಾಡಿ ಚರ್ಮದ ಮೇಲೆ ಮೂಡುವ ಮೊಡವೆ, ಉರಿಯೂತ, ಕಪ್ಪು ಕಲೆ, ಸುಕ್ಕು ತ್ವಚೆಯನ್ನು ನಿವಾರಿಸುತ್ತದೆ.

ಸಕ್ಕರೆ : ಬೇಡವಾದ ಕೂದಲನ್ನು ತೆಗೆಯಲು ಸಕ್ಕರೆ ಸಹಕಾರಿಯಾಗಿದೆ. ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ ಪಾಕ ಮಾಡಿಕೊಂಡು ಅದರಿಂದ ವ್ಯಾಕ್ಸ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ. ಹಾಗೂ ಬೇಡವಾದ ಕೂದಲನ್ನೂ ತೆಗೆಯಬಹುದು.

ಬಾದಾಮಿ ಎಣ್ಣೆ : ಪೂರ್ವ ಈಜಿಪ್ಟ್ ಮಹಿಳೆಯರು ಸೌಂದರ್ಯಕ್ಕೆ ಹೆಸರುವಾಸಿ. ಇವರು ಸ್ನಾನದ ಬಳಿಕ ಬಾದಾಮಿ ಎಣ್ಣೆಯನ್ನು ತಮ್ಮ ತ್ವಚೆಗೆ ಹಚ್ಚಿಕೊಳ್ಳುತ್ತಿದ್ದರಂತೆ. ಇದರಿಂದ ತ್ವಚೆ ಬಿಗಿಯಾಗಿ , ಮೃದುವಾಗಿ ಹೊಳಪಿನಿಂದ ಕೂಡಿರುತ್ತಿತ್ತು ಎಂದು ಹೇಳಲಾಗಿದೆ.

ಸಮುದ್ರದ ಉಪ್ಪು : ಇದನ್ನು ನೀರಿಗೆ ಸೇವಿಸಿ ಆ ನೀರಿನಿಂದ ಸ್ನಾನ ಮಾಡುವುದರಿಂದ ತ್ವಚೆಯ ಸೌಂದರ್ಯ ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿ ಡೆಡ್‌ ಸೀ ಸಾಲ್ಟ್‌ ಲಭ್ಯವಿದ್ದು, ಅದನ್ನು ಬಳಸಬಹುದು. ಇದರಿಂದ ಪೌಷ್ಠಿಕಾಂಶಗಳು ಹೆಚ್ಚಿರುವುದರಿಂದ ಚರ್ಮ ಸುಕ್ಕು ಗಟ್ಟುವುದನ್ನು ತಡೆಯುತ್ತದೆ.

ಅಕ್ಕಿ : ಅಕ್ಕಿಹಿಟ್ಟು ಹಾಗೂ ನೀರನ್ನು ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳನ್ನು ನಿವಾರಿಸಬಹುದು. ಇದಕ್ಕೆ ಚಿಟಿಕೆ ಅರಿಶಿಣ ಸೇರಿಸಿ ಹಚ್ಚಿದರೆ ಮೊಡವೆ ನಿವಾರಣೆಯಾಗುತ್ತದೆ.

 

Leave a Reply

Your email address will not be published.