ಮಿಕ್ಸಿ, ಕುಕ್ಕರ್‌ ಕೊಡೋ ಕಾಂಗ್ರೆಸ್‌ಗೆ ಮತ ಹಾಕಬೇಡಿ : ಶೋಭಾ ಕರಂದ್ಲಾಜೆ

ಬೆಂಗಳೂರು : ಏಪ್ರಿಲ್‌ನಲ್ಲಿ ಚುನಾವಣೆ ಘೋಷಣೆಯಾಗುತ್ತದೆ ಎಂಬ ಆತಂಕವಿತ್ತು, ರಾಜ್ಯದಲ್ಲಿ 2ನೇ ಶನಿವಾರ ರಜಾದಿನ. ಆದ್ದರಿಂದ ಚುನಾವಣಾ ಆಯೋಗ ಮರುಪರಿಶೀಲನೆ ಮಾಡಬಹುದಿತ್ತು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಚುನಾವಣೆ ಮುಂದಕ್ಕೆ ಹೋದಷ್ಟು ದಿನ ರಾಜ್ಯ ಸರ್ಕಾರದ ಭ್ರಷ್ಟಾಚಾರ ಹೆಚ್ಚಾಗ್ತಿತ್ತು. ಈಗಾಗಲೇ ಜಿಲ್ಲೆಗಳಲ್ಲಿ ಶಿಲಾನ್ಯಾಸ ಮಾಡ್ತಿದ್ದಾರೆ. ಅವೆಲ್ಲ ಬೋಗಸ್ ಶಿಲಾನ್ಯಾಸಗಳು. ಸರಿಯಾಗಿ ಟೆಂಡರ್ ಕರೆದಿಲ್ಲ, ಯೋಜನೆ ಆಗಿಲ್ಲ. ಶಿಲಾನ್ಯಾಸ ಮಾತ್ರ ಮಾಡಲಾಗಿದೆ. ಆದ್ರಿಂದ ಕಳೆದ 15 ದಿನಗಳಿಂದ ಸರ್ಕಾರದ ಮಂತ್ರಿಗಳು, ಸಿಎಂ ಮಾಡಿರುವ ಶಿಲಾನ್ಯಾಸ ತಡೆ ಹಿಡಿಯಬೇಕು. ನಿನ್ನೆ ಮೊನ್ನೆ ವಿಲೇವಾರಿ ಆಗಿರುವ ಕಡತಗಳ ಪರಿಶೀಲನೆಯನ್ನ ಚುನಾವಣಾ ಆಯೋಗ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ 15 ದಿನಗಳಿಂದ ಬೇಕಾಬಿಟ್ಟಿ ವರ್ಗಾವಣೆ ಆಗಿವೆ. ರಾಜೇಂದ್ರ ಕುಮಾರ್ ಕಠಾರಿಯಾ ಅವ್ರಿಗೆ ಕಡ್ಡಾಯ ರಜೆ ಮೇಲೆ ಹೋಗುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಇದರಿಂದ ಪ್ರಮಾಣಿಕ ಅಧಿಕಾರಿಗಳಿಗೆ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂಬುದನ್ನ ಸ್ಪಷ್ಟಪಡಿಸುತ್ತದೆ. ಹಿಂದೆ ಕಂಡು ಕೇಳರಿಯದಷ್ಟು ಜಾಹೀರಾತುಗಳನ್ನ ರಾಜ್ಯ ಸರ್ಕಾರ ಕೊಟ್ಟಿದೆ. ರಾಜ್ಯದಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆ ಕಾಪಾಡಬೇಕಿದೆ. ಬೂತ್ ಗಳಿಗೂ ಯಾವ ಪೊಲೀಸ್ ಅಧಿಕಾರಿಗಳನ್ನ ನೇಮಕ ಮಾಡಬೇಕು ಅಂತ ಡಿಸಿ ಗಳ ಮೇಲೆ ಒತ್ತಡ ಹೇರಿರುವುದಾಗಿ ಆರೋಪಿಸಿದ್ದಾರೆ.

Leave a Reply

Your email address will not be published.