ಚುನಾವಣಾ ಗೀತೆ ರಚಿಸುವ ಜವಾಬ್ದಾರಿಯನ್ನು ಯೋಗರಾಜ್‌ ಭಟ್ ಹೆಗಲಿಗೇರಿಸಿದ ಆಯೋಗ

ಬೆಂಗಳೂರು : ಕರ್ನಾಟಕ ಚುನಾವಣೆಯ ದಿನಾಂಕ ಫಿಕ್ಸ್ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಈ ಮಧ್ಯೆ ಚುನಾವಣೆಗೆ ಅದ್ಭುತ ಗೀತೆಯೊಂದನ್ನು ರಚನೆ ಮಾಡುವ ಜವಾಬ್ದಾರಿಯನ್ನು ಚುನಾವಣಾ ಆಯೋಗ, ನಿರ್ದೇಶಕ ಹಾಗೂ ಗೀತೆ ರಚನೆಕಾರರಾದ ಯೋಗರಾಜ್ ಭಟ್‌ ಹಾಗೂ ಪಂಚತಂತ್ರ ಸಿನಿಮಾ ತಂಡಕ್ಕೆ ನೀಡಲಾಗಿದೆ.

ಹಾಡನ್ನು ಚಿತ್ರೀಕರಿಸುವ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿದೆ. ಈ ಬಗ್ಗೆ ಯೋಗರಾಜ್‌ ಭಟ್‌ ಹೇಳಿಕೆ ನೀಡಿದ್ದು, ಇದು ನಿಜಕ್ಕೂ ಹೆಮ್ಮೆಯ ವಿಚಾರ. ಕರ್ನಾಟಕದಲ್ಲಿ ಶೇ 30ರಷ್ಟು ಮಂದಿ ಮತದಾನ ಮಾಡುತ್ತಿಲ್ಲ. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಈಗಾಗಲೆ ಗೀತರಚನೆ ಕೆಲಸವೂ ನಡೆಯುತ್ತಿದೆ. ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದು, ಇಮ್ರಾನ್‌ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ ಈ ತಿಂಗಳ 30ರಂದು ವಿಧಾನಸೌಧ ಹಾಗೂ ಕಂಠೀರವ ಕ್ರೀಡಾಂಗಣದ ಎದುರು ದೊಡ್ಡ ಚಿತ್ರೀಕರಣ ನಡೆಯುವುದಾಗಿ ಹೇಳಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com