IPL : ಕೊಹ್ಲಿ ಬಗ್ಗೆ ನೆಹ್ರಾ ಮನದಾಳದ ಮಾತು : RCB ಬೌಲಿಂಗ್ ಕೋಚ್ ಹೇಳಿದ್ದೇನು..?

ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯ 11ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡದ ಬೌಲಿಂಗ್ ಕೋಚ್ ಆಶಿಶ್ ನೆಹ್ರಾ, ಕ್ಯಾಪ್ಟನ್ ಕೊಹ್ಲಿ ಹಾಗೂ ತಮ್ಮ ನಡುವಿನ ಬಾಂಧವ್ಯದ ಕುರಿತು ಮಾತನಾಡಿದ್ದಾರೆ.

‘ ವಿರಾಟ್ ನನ್ನ ಕಣ್ಣ ಮುಂದೆಯೇ ಬೆಳೆದ ಹುಡುಗ. ನಾನು ಅವನೊಂದಿಗೆ ತುಂಬಾ ಕ್ರಿಕೆಟ್ ಆಡಿದ್ದೇನೆ. ನನಗೆ ಕೊಹ್ಲಿಯ ಒಳಹೊರಗು ಗೊತ್ತು. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ ‘ ಎಂದಿದ್ದಾರೆ.

‘ ಕೋಚ್ ಹಾಗೂ ಕ್ಯಾಪ್ಟನ್ ನಡುವೆ ಇಂತಹ ಉತ್ತಮ ಸಂಬಂಧವಿರುವುದು ತುಂಬ ಒಳ್ಳೆಯದು. ಕ್ರಿಕೆಟ್ ನಲ್ಲಿ ಕ್ಯಾಪ್ಟನ್ ಪಾತ್ರ ತುಂಬ ಮುಖ್ಯವಾಗಿರುತ್ತದೆ. ಕೋಚಿಂಗ್ ಸಿಬ್ಬಂದಿ ಇರುವುದು ನಾಯಕನಿಗೆ ಬೆಂಬಲ ನೀಡಲು ಮಾತ್ರ. ಒಬ್ಬ ವ್ಯಕ್ತಿಯಾಗಿ, ಕ್ರಿಕೆಟರ್ ಆಗಿ ಕೊಹ್ಲಿಯ ಬೆಳವಣಿಗೆಯನ್ನು ನಾನು ನೋಡಿದ್ದೇನೆ ‘

Image result for virat kohli nehra ashish

‘ ನಾನು RCB ಆಟಗಾರರೊದಿಗೆ ಕ್ರಿಕೆಟ್ ಆಡಿದ್ದೇನೆ. ಟಿ20 ಕ್ರಿಕೆಟ್ ಹೇಗೆ ವರ್ಕ್ ಆಗುತ್ತದೆ ಎಂದು ನನಗೆ ಗೊತ್ತಿದೆ. ಆರ್ ಸಿಬಿ ಹುಡುಗರೊಂದಿಗೆ ನನ್ನ ಅನುಭವವನ್ನು ಹಂಚಿಕೊಳ್ಳಲಿದ್ದೇನೆ. ನನ್ನ ಕೆಲಸ ಕೋಚಿಂಗ್ ಎನ್ನುವುದಕ್ಕಿಂತ ಮ್ಯಾನೇಜ್ ಮೆಂಟ್ ಎಂದು ಭಾವಿಸಿದ್ದೇನೆ ‘ ಎಂದಿದ್ದಾರೆ.

One thought on “IPL : ಕೊಹ್ಲಿ ಬಗ್ಗೆ ನೆಹ್ರಾ ಮನದಾಳದ ಮಾತು : RCB ಬೌಲಿಂಗ್ ಕೋಚ್ ಹೇಳಿದ್ದೇನು..?

  • March 28, 2018 at 3:04 AM
    Permalink

    Very quickly this website will be famous among all blogging users,
    due to it’s pleasant articles

    Reply

Leave a Reply

Your email address will not be published.

Social Media Auto Publish Powered By : XYZScripts.com