ಜೀವನ ಸಂಗಾತಿಯನ್ನು ಆರಿಸುವಾಗ ಈ ಐದು ರಾಶಿಯವರ ಬಗ್ಗೆ ಎಚ್ಚರವಿರಲಿ !

ಜ್ಯೋತಿಷ್ಯ ಶಾಸ್ತ್ರ ಅದೆಷ್ಟೋ ಬಾರಿ ಸತ್ಯವಾಗುತ್ತದೆ. ಅಷ್ಟಿಲ್ಲದೆ ಎಲ್ಲರೂ ಜ್ಯೋತಿಷ್ಯವನ್ನು ನಂಬಲು ಸಾಧ್ಯವಿಲ್ಲ ಬಿಡಿ. ರಾಶಿಗಳ ಫಲಾಫಲಗಳು, ಅದರ ಶಕ್ತಿ, ನಮಗೇ ಗೊತ್ತಿಲ್ಲದಿರುವ ನಮ್ಮ ಶಕ್ತಿ, ಮದುವೆ ಪ್ರತಿಯೊಂದು ವಿಚಾರದಲ್ಲೂ ಜ್ಯೋತಿಷ್ಯ ಶಾಸ್ತ್ರ ಅನೇಕ ಬಾರಿ ಸತ್ಯವಾಗುತ್ತದೆ ಎಂದು ಹೇಳುತ್ತಾರೆ.
ಅಲ್ಲದೆ ನಮ್ಮ ದೇಶದಲ್ಲಿ ಮದುವೆಯಾಗಬೇಕೆಂದರೆ ಅದಕ್ಕೆ ಇಬ್ಬರ ಜಾತಕವೂ ಕೂಡಿ ಬರಬೇಕು ಎನ್ನುತ್ತಾರೆ. ಇದರ ಬಗ್ಗೆ ಅನೇಕರಿಗೆ ಬಹಳ ಆಸಕ್ತಿ ಸಹ ಇದೆ. ಹಾಗಿದ್ದರೆ ಯಾವ ರಾಶಿಯವರಿಗೆ ಯಾವ ರಾಶಿಯ ಸಂಗಾತಿ ಸಿಕ್ಕರೆ ಒಳ್ಳೆಯದು, ಅಥವಾ ಯಾರಿಗೆ ಯಾವ ರಾಶಿಯವರು ಸಿಕ್ಕರೆ ಸಂಬಂಧ ಕಷ್ಟ ಎಂಬುದನ್ನೂ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಯಾವ ರಾಶಿಯವರಿಗೆ ಯಾವ ರಾಶಿಯವರು ಜೋಡಿಯಾದರೆ ಕಷ್ಟಕರ ?

ಸಿಂಹ ಹಾಗೂ ಕಟಕ

ಈ ರಾಶಿಯವರು ಮದುವೆಯಾದರೆ ಜೀವನ ಕಷ್ಟ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವಾಸ್ತವದಲ್ಲಿ ಇವರ ನಡುವಿನ ಸಂಬಂಧ ಕಷ್ಟ. ಈ ರಾಶಿಯವರು ಜೊತೆಯಿದ್ದರೆ ಇಬ್ಬರಿಗೂ ಗೊಂದಲ ಏರ್ಪಡುತ್ತದೆ. ಇಬ್ಬರ ಸಂಬಂಧದ ಮಧ್ಯೆ ಅಪಶೃತಿ ಉಂಟಾಗಲು ಇದೂ ಕಾರಣವಾಗಬಹುದು. ಸಿಂಹ ರಾಶಿಯವರು ಸಹೃದಯಿಗಳು, ಕರುಣಾಮಯಿಗಳು ಆಗಿರುತ್ತಾರೆ. ಆದರೆ ಕೆಲವೊಮ್ಮೆ ವಿನಾಕಾರಣ ದೂಷಿಸುವಂತಹ ಗುಣವೂ ಇವರಲ್ಲಿರುವುದರಿಂದ ಕಟಕ ರಾಶಿಯವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಕಟಕ ರಾಶಿಯವರದ್ದು ಆಕ್ರಮಣಶಾಲಿ ಮನೋಭಾವವಾದ ಕಾರಣ ಸಂಬಂಧ ಹದಗೆಡುವ ಸಾಧ್ಯತೆ ಹೆಚ್ಚು.

ಮಕರ ಹಾಗೂ ಕುಂಭ
ಈ ರಾಶಿಯವರೂ ದೃಢ ಸಂಕಲ್ಪ ಹೊಂದಿರುತ್ತಾರೆ. ಆದರೆ ಈ ರಾಶಿಯವರು ಗುರಿ ತಲುಪಲು ತೆಗೆದುಕೊಳ್ಳುವ ದಾರಿಗಳು ಬೇರೆ ಬೇರೆಯಾದ ಕಾರಣ ಹೊಂದಾಣಿಕೆಯ ಸಮಸ್ಯೆಯಾಗುತ್ತದೆ. ಮಕರ ರಾಶಿಯವರಿಗೆ ನಿರ್ದಿಷ್ಟತೆ ಹಾಗೂ ಸ್ಪಷ್ಟತೆ ಇರಬೇಕು. ಆದರೆ ಕುಂಭ ರಾಶಿಯವರು ತಾವು ಹೀಗೇ ಇರಬೇಕು ಎಂಬ ಭಾವನೆ ಹೊಂದಿರುವವರಾಗಿರುತ್ತಾರೆ. ಬೇರೆಯವರ ಎದುರು ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವರ ತಲೆಯಲ್ಲಿರುವ ಕಾರಣ ಕುಂಭ ರಾಶಿಯವರ ಪ್ರಾಬಲ್ಯತೆ ಹೆಚ್ಚಾದಾಗ ಇಬ್ಬರ ಮಧ್ಯೆ ಅಸಮಾಧಾನ ಉಂಟಾಗಬಹುದು. ಮಕರ ರಾಶಿಯವರ ನೈಜ ಗುಣವಾದ ಸ್ವಾವಲಂಬನೆ ಹಾಗೂ ಆತ್ಮಗೌರವ ನೀಡುವಿಕೆಗೆ ಇದು ಒಪ್ಪಲು ಸಾಧ್ಯವಿಲ್ಲವಾಗಿದ್ದು, ಅವರನ್ನು ತಿರುಗಿ ಬೀಳುವಂತೆ ಮಾಡುತ್ತದೆ.

ಕನ್ಯಾ ಹಾಗೂ ಮಿಥುನ
ಈ ಎರಡು ರಾಶಿಯವರೂ ಪ್ರಾಯೋಗಿಕ ಮನಸ್ಥಿತಿಯವರಾಗಿದ್ದು, ಮಿಥುನ ರಾಶಿಯವರಿಗೆ ಮಹತ್ವಾಕಾಂಕ್ಷೆಗಳು ಹೆಚ್ಚಿದ್ದು, ಹೆಚ್ಚು ಕನಸು ಕಾಣುವವರಾಗಿರುತ್ತಾರೆ. ಇವರಿಬ್ಬರ ಮಧ್ಯೆ ಸಾಮ್ಯತೆ ಬಹಳ ಕಡಿಮೆ. ಕನ್ಯಾ ರಾಶಿಯವು ವಾಸ್ತವಕ್ಕೆ ಹತ್ತಿರವಾಗಿ ಬದುಕುವವರಾಗಿದ್ದು ತಮ್ಮ ಗುರಿ ಮುಟ್ಟುವ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ. ಆದರೆ ಮಿಥುನ ರಾಶಿಯವರು ದೊಡ್ಡ ಕನಸು ಕಾಣುತ್ತಾರೆಯೇ ಹೊರತು ಅದನ್ನು ತಲುಪುವುದರ ಬಗ್ಗೆ ಗಮನ ಹರಿಸುವುದಿಲ್ಲ. ಇವರಿಬ್ಬರಲ್ಲಿ ಕನ್ಯಾ ರಾಶಿಯವರೇ ಜವಾಬ್ದಾರಿ ವಹಿಸಿಕೊಳ್ಳುವುದರಿಂದ ಮಿಥುನ ರಾಶಿಯವರ ಬಗ್ಗೆ ಅಸಮಾಧಾನ ಉಂಟಾಗುತ್ತದೆ.

ತುಲಾ ಹಾಗೂ ವೃಷಭ
ಇವರಿಬ್ಬರೂ ಒಂದೇ ಗುಣಗಳನ್ನು ಹೊಂದಿರುತ್ತಾರೆ. ಆದ್ದರಿಂದಲೇ ಅವರ ಸಂಬಂಧ ಕಷ್ಟವಾಗುತ್ತದೆ. ಸಂಗಾತಿಯಲ್ಲೂ ತಮ್ಮನ್ನೇ ಹೆಚ್ಚು ಕಾಣುವ ಇವರು, ದೃಢ ಸಂಕಲ್ಪ ಹೊಂದಿರುತ್ತಾರೆ. ಎಲ್ಲವನ್ನೂ ತುಂಬು ಹೃದಯದಿಂದ ಸ್ವೀಕರಿಸುತ್ತಾರೆ. ವೃಷಭ ರಾಶಿಯವರಲ್ಲಿ ಅತಿಯಾದ ಪ್ರಾಮಾಣಿಕತೆ ಇದ್ದು, ಹೆಚ್ಚಿಗೆ ಅಪೇಕ್ಷೆ ಪಡುತ್ತಾರೆ. ಈ ಗುಣ ಎಲ್ಲರೊಂದಿಗೂ ಒಂದೇ ರೀತಿ ಬೆರೆಯಲು ಇಷ್ಟಪಡುವ ತುಲಾ ರಾಶಿಯವರನ್ನು ಕಟ್ಟಿ ಹಾಕಿದಂತೆ ಅನಿಸುತ್ತದೆ. ಅಲ್ಲದೆ ಒಮ್ಮೆ ಬೇಸರವಾದರೆ ಹೊಂದಿಕೊಳ್ಳದ ಗುಣ ಇವರದ್ದಾಗಿದ್ದು, ಗಲಾಟೆಯಾಗುವ ಸಾಧ್ಯತೆ ಹೆಚ್ಚು.

ವೃಶ್ಚಿಕ ಹಾಗೂ ಮೀನಾ
ಈ ರಾಶಿಯವರು ಭಾವನಾತ್ಮಕ ಜೀವಿಗಳು. ಆದರೆ ವ್ಯಕ್ತಪಡಿಸುವ ಗುಣದಲ್ಲಿ ಭಿನ್ನತೆ ಇದೆ. ವೃಶ್ಚಿಕ ರಾಶಿಯವರು ಅತಿಯಾಗಿ ಭಾವನೆಗಳನ್ನು ಹೊರಹಾಕಿದರೆ ಮೀನಾ ರಾಶಿಯವರು ಮೃದುವಾದ ಭಾವನೆ ಹೊಂದಿದವರಾಗಿರುತ್ತಾರೆ. ಇಬ್ಬರೂ ಹೊಸತನ್ನು ಬಯಸುವವರಾಗಿದ್ದು, ಮೀನಾ ರಾಶಿಯವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಇದು ವೃಶ್ಚಿಕ ರಾಶಿಯವರಿಗೆ ಸಹಿಸುವುದು ಕಷ್ಟ.

Leave a Reply

Your email address will not be published.