ಪಾಕಿಸ್ತಾನಕ್ಕಲ್ಲ, ಮೊದಲು ಈ ಛಿದ್ರ ರಾಮಯ್ಯನಂತವರಿಗೆ ಬುದ್ದಿ ಕಲಿಸ್ಬೇಕು ; ಅನಂತ್ ಹೆಗಡೆ
ಯಾದಗಿರಿ : ಪಾಕಿಸ್ತಾನಕ್ಕೆ ಪಾಠ ಕಲಿಸುವುದು ದೊಡ್ಡ ಸವಾಲು ಅಲ್ಲ. ದೇಶದಲ್ಲಿರುವ (ಛಿದ್ರ) ರಾಮಯ್ಯನಂತಹವರಿಗೆ ಮೊದಲು ಪಾಠ ಕಲಿಸಬೇಕು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಯಾದಗಿರಿಯಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ತಂದೆಯೇ ಇರಲಿ, ತಾಯಿಯೇ ಇರಲಿ. ಸಮಾಜವನ್ನು ಒಡೆಯಲು ಬಿಡುವುದಿಲ್ಲ. ಅದಕ್ಕೆ ಕಡಿವಾಣ ಹಾಕುತ್ತೇವೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಎಂದಿದ್ದಾರೆ.
ಭಾಷಣದುದ್ದಕ್ಕೂ ಛಿದ್ರ ರಾಮಯ್ಯ ಎಂದು ವ್ಯಂಗ್ಯ ಮಾಡಿರುವ ಹೆಗಡೆ, ಧರ್ಮಕೋಸ್ಕರ ಯಾರು ತಮ್ಮ ಮೈಗೆ ಬೆಂಕಿ ಹಚ್ಚಿಕೊಳ್ಳುತ್ತಾರೋ ಅಂತವರ ಜೊತೆ ನೀವೆಲ್ಲ ಇರಬೇಕು. ಪಾಕಿಸ್ತಾನ ವಿಭಜನೆ ಆದಾಗ ಅದೇಷ್ಟೋ ಜನರು ಹಿಂದುಗಳು ಅತ್ಯಾಚಾರ, ಅನ್ಯಾಯಕ್ಕೆ ಒಳಗಾದ್ರು. ಹಿಂದು ಸಮಾಜ ಅನಾಥ ಆದ್ರೆ ನಿಮ್ಮ ಮನೆತನಕ್ಕೆ ಗೌರವವಿಲ್ಲ, ಅನಾಥವಾಗಲು ಬಿಡಬೇಡಿ. ದೇಶಕ್ಕೆ ಬಾಂಬು ಇಟ್ಟಂತವರಲ್ಲಿ ಬಹುತೇಕರು ನಮ್ಮ ಭಾಗದ ಉಗ್ರರೆ, ಅಂತವರಿಗೆ ಶಿಕ್ಷಕ್ಕೆ ಆಗಿಲ್ಲ. 23 ಹಿಂದು ಮಕ್ಕಳ ಕೊಲೆಯಾದಾಗ ಆಗ ಈ ಲಂಕೇಶ್ ವಾದಿಗಳು ಎಲ್ಲಿ ಹೋಗಿದ್ರು.ಈ ದೇಶವನ್ನು ಹಾಳು ಮಾಡಿದ್ದೆ ಈ ಎಡಬಿಡಂಗಿಗಳು, ದೇಶ ದ್ರೋಹಿಗಳು. ಅಪರೂಪಕ್ಕೆ ಒಬ್ಬ ಮೆಚ್ಚುವಂತಹ ನಾಯಕ ಬಂದಿದ್ದಾರೆ ಅವರಿಗೆ ಬೆಂಬಲಿಸಬೇಕಾಗಿದೆ ಎಂದಿದ್ದಾರೆ.
ನೂರಾರು ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್ ನವರು ದೇಶವನ್ನು ಒತ್ತೆ ಇಟ್ಟಿದ್ದರು. ಕಾಂಗ್ರೆಸ್ ಒಂದು ಪಕ್ಷ ಅಲ್ಲ ಅದೊಂದು ಸಂಸ್ಕೃತಿ, ದೇಶ, ಜಾತಿ ಒಡೆಯುವ ಪಕ್ಷ. ಈ ಜಾತಿ ಪದ್ದತಿಯನ್ನು ಅಂಬೇಡ್ಕರ್ ವಿರೋಧಿಸಿದ್ರು.ಅವರನ್ನೇ ಸಂಪೂರ್ಣವಾಗಿ ಕಾಂಗ್ರೆಸ್ ನವರು ಮುಗಿಸಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.