WC Qualifiers : ವೆಸ್ಟ್ ಇಂಡೀಸ್ ತಂಡಕ್ಕೆ ಸೋಲು : ಅಫಘಾನಿಸ್ತಾನಕ್ಕೆ ಪ್ರಶಸ್ತಿ ಗರಿ

ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಫಘಾನಿಸ್ತಾನ ತಂಡ 7 ವಿಕೆಟ್ ಜಯ ಸಾಧಿಸಿದೆ. ಇದರೊಂದಿಗೆ ಅಸ್ಘರ್ ಸ್ಟ್ಯಾನಿಕ್ ಜಾಯ್ ನಾಯಕತ್ವದ ಅಫಘಾನಿಸ್ತಾನ ವಿಶ್ವಕಪ್ ಕ್ವಾಲಿಫೈಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ 46.5 ಓವರುಗಳಲ್ಲಿ 204 ಕ್ಕೆ ಆಲೌಟ್ ಆಯಿತು. ವಿಂಡೀಸ್ ಪರವಾಗಿ ರೋವ್ ಮ್ಯಾನ್ ಪಾವೆಲ್ 44, ಶಿಮ್ರಾನ್ ಹೆಟ್ಮಾಯರ್ 38 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಅಫಘಾನಿಸ್ತಾನ 40.4 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 206 ರನ್ ಸೇರಿಸಿ ಗೆಲುವಿನ ನಗೆ ಬೀರಿತು. ಅಫಘಾನಿಸ್ತಾನ ಮೊಹಮ್ಮದ್ ಶೆಹಜಾದ್ 84 ಹಾಗೂ ರಹಮತ್ ಶಾ 51 ರನ್ ಗಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com